ನೆಲಮಂಗಲ: ಕೊರೊನಾ ಆತಂಕದ ನಡುವೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿ ಪರೀಕ್ಷಾ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಖಾಸಗಿ ಕಾಲೇಜಿನಲ್ಲಿ ನೀಟ್ ಪರೀಕ್ಷೆ ಆಯೋಜನೆ ಮಾಡಲಾಗಿದೆ. ಆದರೆ ಇಲ್ಲಿ ಕೊರೊನಾ ನಿಯಮ ಸಂಪೂರ್ಣ ಬ್ರೇಕ್ ಆಗಿದೆ. ಪರೀಕ್ಷೆಗೆ ಮಕ್ಕಳ ಜೊತೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಪೊಲೀಸರು ಲಾಠಿ ಹಿಡಿದು ಪೋಷಕರನ್ನು ಚದುರಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಕಲಿಕೆಯ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು: ಜೊಲ್ಲೆ
Advertisement
Advertisement
ಈ ಹಿನ್ನೆಲೆ ಪರೀಕ್ಷಾ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾ ಆತಂಕದ ನಡುವೆ ಸರಿಯಾದ ವ್ಯವಸ್ಥೆ ಇಲ್ಲದ ಸೆಂಟರ್ ಬಳಿ ಪರೀಕ್ಷೆ ಆಯೋಜನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ತುಮಕೂರು-ಬೆಂಗಳೂರು ರಾಷ್ಟ್ರಿಯ ಹೆದ್ದಾರಿ ಪಕ್ಕದ ಬಳಿಯ ಖಾಸಗಿ ಕಾಲೇಜಿನಲ್ಲಿ ನೀಟ್ ಪರೀಕ್ಷಾ ಸೆಂಟರ್ ಗುರುತಿಸಿರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು
Advertisement
ಈ ಕುರಿತು ಮಾತನಾಡಿದ ಪೋಷಕರು, ಮುಂದೆ ಇಂತಹ ಸಮಸ್ಯೆಗಳು ಎದುರಾಗದಂತೆ ಎಲ್ಲಾ ವ್ಯವಸ್ಥೆ ಇರುವ ಪರೀಕ್ಷಾ ಕೇಂದ್ರವನ್ನು ಗುರುತು ಮಾಡಬೇಕು. ಅದರ ಜೊತೆಗೆ ಕೊರೊನಾ ಆತಂಕದ ನಿಯಮಗಳನ್ನು ಪಾಲಿಸುವಂತೆ ಮಂಡಳಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..!