ನವದೆಹಲಿ: 2021ನೇ ಸಾಲಿನ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳ ಇಮೇಲ್‍ಗೆ ನೇರವಾಗಿ ರಿಸಲ್ಟ್ ಕಳಿಸಲಾಗುತ್ತಿದೆ.
ನ್ಯಾಷನಲ್ ಟೆಸ್ಟಿಂಗ್ ಏಜಿನ್ಸಿ(ಎನ್‍ಡಿಎ) ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಆದರೆ ಇದನ್ನು ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸದೇ ವಿದ್ಯಾರ್ಥಿಗಳ ಇಮೇಲ್‍ಗೆ ನೇರವಾಗಿ ಕಳಿಸಿರುವುದು ತಿಳಿದುಬಂದಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಸೋತಿದ್ದು ಎಲ್ಲಿ? ಕಳಪೆ ಪ್ರದರ್ಶನಕ್ಕೆ ಕಾರಣ ಏನು?
Advertisement
Advertisement
ಅಧಿಕೃತವಾಗಿ ವೆಬ್‍ಸೈಡ್ www.neet.nta.nic.in ನಲ್ಲೂ ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸಲಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ ಫಲಿತಾಂಶ ತುಳಿದುಕೊಳ್ಳಬಹುದು. ಇದನ್ನೂ ಓದಿ: ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ
Advertisement
Advertisement
16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು:
ಪದವಿಪೂರ್ವ ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು 12 ಸೆಪ್ಟೆಂಬರ್ 2021 ರವರೆಗೆ ನಡೆಸಲಾಗಿತ್ತು. ಈ ವರ್ಷ ಸುಮಾರು 16 ಲಕ್ಷ ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ಹಾಜರಾಗಿದ್ದರು. ಅಕ್ಟೋಬರ್ 15 ರಂದು ತಾತ್ಕಾಲಿಕ ಉತ್ತರ ಕೀಯನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ
28 ಅಕ್ಟೋಬರ್ 2021 ರಂದು ಸುಪ್ರೀಂ ಕೋರ್ಟ್ NEET 2021 ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸಲು NTAಗೆ ಅನುಮತಿ ನೀಡಿತ್ತು. ಇದಾದ ಬಳಿಕ ಇಂದು NTA NEET ಫಲಿತಾಂಶದೊಂದಿಗೆ ಫೈನಲ್ ಅನ್ಸರ್ ಕೀ ಅನ್ನು ಸಹ ಬಿಡುಗಡೆ ಮಾಡಿದೆ.
NEET ಫಲಿತಾಂಶ ಬಿಡುಗಡೆಯಾದ ನಂತರ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಬೇಕಾಗಲಿದೆ. ಇದಕ್ಕಾಗಿ, ಅಭ್ಯರ್ಥಿಗಳಿಗೆ NEET 2021 ಪ್ರವೇಶ ಪತ್ರ, NEET ಫಲಿತಾಂಶ ಶ್ರೇಣಿಯ ಪತ್ರ ಅಥವಾ ಅಂಕಪಟ್ಟಿ, 10, 12 ತರಗತಿ ಪ್ರಮಾಣಪತ್ರ, ಯಾವುದಾದರೂ ಒಂದು ಐಡಿ, ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿದೆ.