ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಸುದೀಪ್ ಜನ್ಮದಿನಕ್ಕೆ ಹಾಗೂ ವಿಕ್ರಾಂತ್ ರೋಣ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ನಾಳೆ (ಸೆಪ್ಟೆಂಬರ್2) ಡೆಡ್ ಮ್ಯಾನ್ ಆ್ಯಂಥಮ್ ರಿಲೀಸ್ ಆಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಕ್ರಾಂತ ರೋಣ ಚಿತ್ರತಂಡ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀರಜ್ ಚೋಪ್ರಾ ಅವರು ಸುದೀಪ್‍ಗೆ ಬರ್ತ್‍ಡೆ ವಿಶ್ ಮಾಡಿದ್ದಾರೆ. ಜೊತೆಗೆ ಅವರ ಸಿನಿಮಾಗೂ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಜತೆ ಅಚ್ಚರಿ ಕೂಡ ಹೊರ ಹಾಕಿದ್ದಾರೆ.
Man with the golden arm @Neeraj_chopra1 sends his wishes to Baadshah Kichcha Sudeepa. ✨ #VikrantRona @KicchaSudeep @anupsbhandari @JackManjunath @Asli_Jacqueline @nirupbhandari @shaliniartss @The_BigLittle @Kichchacreatiin @TSeries @LahariMusic #WorldGetsANewHero pic.twitter.com/vo6EleEkdX
— VikrantRona (@VikrantRona) September 1, 2021
ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಖ್ಯಾತಿ ದೇಶದ ಮೂಲೆಮೂಲೆಗೂ ತಲುಪಿದೆ. ಅವರು ಸುದೀಪ್‍ಗೆ ಬರ್ತ್‍ಡೇ ವಿಶ್ ಮಾಡಿರೋದು ವಿಶೇಷ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ
ಇದು ತುಂಬಾ ಸಿಹಿಯಾಗಿದೆ. ನನ್ನ ಸಹೋದರಿನಿಗೆ ಧನ್ಯವಾದಗಳು. ನಿಮಗೆ ಯಾವಗಲೂ ನನ್ನ ಶುಭ ಹಾರೈಕೆ ಇರುತ್ತದೆ ಎಂದು ಸುದೀಪ್ ನೀರಜ್ ಚೋಪ್ರಾ ಅವರ ವಿಶ್‍ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
This is the sweetest .
Thank you my brotherman @Neeraj_chopra1 for ur gesture.
My best wshs to you always .
Aim further ???????? https://t.co/hl3QD0GllZ
— Kichcha Sudeepa (@KicchaSudeep) September 1, 2021
ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಅವರು ಪರಭಾಷೆಯಲ್ಲೂ ಅಭಿಮಾನಿ ಬಳಗ ಹೊಂದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಕೆ ವಿಶ್‍ಗಳು ಸುದೀಪ್ ಅವರಿಗೆ ಬರುತ್ತಿವೆ.