ಗ್ಲಾಸ್ಗೋ: ಭಾರತದ ಪರ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra), ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (CWG 2026) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇಂದು ಬೆಳಗ್ಗಿನಜಾವ ನಡೆದ ಜಾವೆಲಿನ್ (Javelin Throw) ಸ್ಪರ್ಧೆಯ ಫೈನಲ್‌ನಲ್ಲಿ ನೀರಜ್ ಚೋಪ್ರಾ 85.83 ಮೀಟರ್ ಜಾವೆಲಿನ್ ಎಸೆಯುವ ಮೂಲಕ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಭಾರತದ ಮತ್ತೋರ್ವ ಜಾವೆಲಿನ್ ಪಟು ಯಶ್‌ವೀರ್ ಸಿಂಗ್ 85.41 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಫೈನಲ್ ತಲುಪಿದ್ದ ಭಾರತದ ಮತ್ತೋರ್ವ ಸ್ಪರ್ಧಿ ರೋಹಿತ್ ಯಾದವ್ 81.56 ಮೀಟರ್ ಎಸೆದ ಹಿನ್ನೆಲೆ ಪ್ರಶಸ್ತಿ ಪಡೆಯುವಲ್ಲಿ ವಿಫಲರಾದರು.

ಇನ್ನೂ 89.75 ಮೀಟರ್ ಜಾವೆಲಿನ್ ಎಸೆದ ಶ್ರೀಲಂಕಾದ ಕ್ರೀಡಾಪಟು ರುಮೇಶ್ ತರಂಗ ಪತಿರಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಪ್ರಶಸ್ತಿ ಸುತ್ತಿನಲ್ಲಿ ಯಾರಿಗೆ ಎಷ್ಟನೆ ಸ್ಥಾನ?
1. ರುಮೇಶ್ ತರಂಗ ಪತಿರಗೆ – 89.75 ಮೀಟರ್
2. ನೀರಜ್ ಚೋಪ್ರಾ – 85.83 ಮೀಟರ್
3. ಯಶ್ ವೀರ್ ಸಿಂಗ್ – 85.41 ಮೀಟರ್
4. ಆಂಡರ್ಸನ್ ಪೀಟರ್ಸ್ – 83.88 ಮೀಟರ್
5. ಡೌ ಸ್ಮಿಟ್ – 82.88 ಮೀಟರ್
6. ಕೆಶಾರ್ನ್ ವಾಲ್ಕಾಟ್ – 82.55 ಮೀಟರ್
7. ರೋಹಿತ್ ಯಾದವ್ – 81.56 ಮೀಟರ್
8. ಬೆನ್ ಈಸ್ಟ್ – 81.12 ಮೀಟರ್
