ಹೆಲ್ಸಿಂಕಿ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಕ್ರೀಡಾತಾರೆ ನೀರಜ್ ಚೋಪ್ರಾ ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 86.69 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL
Advertisement
Olympic champion javelin thrower @Neeraj_chopra1 wins at Kuortane Games #Bahubali2 pic.twitter.com/oxcp5d98bY
— Dheeraj Choudhary (@_dheerajrakho) June 19, 2022
Advertisement
ಫಿನ್‌ಲ್ಯಾಂಡ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು, ಈ ಮೂಲಕ ತಮ್ಮದೇ ದಾಖಲೆ ಮುರಿದಿದ್ದರು. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ
Advertisement
ನೀರಜ್ ಚೋಪ್ರಾ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್‌ಗಿಂತ ಮೊದಲು ಗುರಿ ತಲುಪಿದರು.
Advertisement
ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು. ಕೆಶೋರ್ನ್ ವಾಲ್ಕಾಟ್ 86.64 ಮೀ. ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರೆ, ಆ್ಯಂಡರ್ಸನ್ ಪೀಟರ್ಸ್ 84.75 ಮೀಟರ್ ಎಸೆಯುವ ಉತ್ತಮ ಪ್ರಯತ್ನದೊಂದಿಗೆ 3ನೇ ಸ್ಥಾನ ಪಡೆದರು.