ದುಬೈ: ಮಾಲ್ಡೀವ್ಸ್ ಪ್ರವಾಸದಿಂದ ಹಿಂದಿರುಗಿದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ದುಬೈನಲ್ಲಿ ಜಾಲಿ ಮೂಡ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
Advertisement
ನಿನ್ನೆ ಅವರು ಸ್ಕೈ ಡೈವ್ ಮಾಡುವ ವೀಡಿಯೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೀರಜ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಅಂಡರ್ವಾಟರ್ನಲ್ಲಿ ಚಿನ್ನದ ಹುಡುಗ- ವೀಡಿಯೋ ನೋಡಿ
Advertisement
View this post on Instagram
Advertisement
ವಿಮಾನದಿಂದ ಜಿಗಿಯುವ ಮೊದಲು ನಾನು ಹೆದರುತ್ತಿದ್ದೆ. ಆದರೆ ಈಗ ಖುಷಿಯಾಗುತ್ತಿದೆ. ಒಮ್ಮೆಯಾದ್ರೂ ಸ್ಕೈ ಡೈವ್ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೀರಜ್ ಅವರ ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಪತ್ನಿಯಾಗುವವಳು ನನ್ನಂತೆಯೇ ಕ್ರೀಡಾಪಟುವಾಗಿರಬೇಕು: ನೀರಜ್ ಚೋಪ್ರಾ
Advertisement
ಜಾಲಿ ಮೂಡ್ನಲ್ಲಿ ಇರುವ ನೀರಜ್ ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್ಗೆ ಹೋಗಿದ್ದರು. ಸಮುದ್ರದಡಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಾ ಜಾವೆಲಿನ್ ಎಸೆತಯವಂತೆ ನಟಿಸಿದ್ದರು. ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಆಕಾಶದಲ್ಲಿ, ನೆಲದ ಮೇಲೆ ಅಥವಾ ನೀರಿನಲ್ಲಿ ನಾನು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದೇನೆ ಎಂದು ಶಿರ್ಷಿಕೆಯನ್ನು ನೀಡಿದ್ದರು.