– ಶಂಕರ್ ನಾಗ್ ಜೊತೆಗೂ ನಟಿಸಿದ್ದ ಈ ನಟಿ
ಮುಂಬೈ: ಬಾಲಿವುಡ್ ನಟಿ ನೀನಾ ಗುಪ್ತಾ ನಾನು ಚಿಕ್ಕವಳಾಗಿದ್ದಾಗ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದು, ಈಗ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ನೀನಾ ಗುಪ್ತಾ ಅವರ ‘ಸ್ಯಾಚ್ ಕಹುನ್ ತೋ’ ಆತ್ಮಚರಿತ್ರೆಯನ್ನು ಜೂನ್ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಆತ್ಮಚರಿತ್ರೆಯ ಒಂದು ಆಯ್ದ ಭಾಗದಲ್ಲಿ ಆಕೆ ತನ್ನ ಮೇಲೆ ಆದ ಕಿರುಕುಳವನ್ನು ಹೇಳಿಕೊಂಡಿದ್ದರು. ಅವರ ಈ ಅನುಭವದ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗುಪ್ತಾ ಅವರಿಗೆ 62 ವರ್ಷವಾಗಿದ್ದು, ಅವರು ಚಿಕ್ಕವರಿದ್ದಾಗ ವೈದ್ಯರು ಮತ್ತು ಟೈಲರ್ ನಿಂದ ಕಿರುಕುಳಕ್ಕೊಳಗಾಗಿದ್ದೆ ಎಂದು ತಮಗಾದ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್
View this post on Instagram
ಈ ವಿಚಾರಕ್ಕೆ ಹೆದರಿಕೊಂಡಿದ್ದು, ಒಂದು ವೇಳೆ ಎಲ್ಲರೂ ಇದನ್ನು ನನ್ನ ತಪ್ಪು ಎಂದು ಹೇಳಬಹುದೆಂಬ ಭಯದಿಂದ ತನ್ನ ತಾಯಿಗೂ ಸಹ ಘಟನೆ ಕುರಿತು ಏನನ್ನೂ ಹೇಳಿಕೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ. ಗುಪ್ತಾ ತಮ್ಮ ಪುಸ್ತಕದಲ್ಲಿ ಬರೆಕೊಂಡಿದ್ದು, ಚಿಕ್ಕ ವಯಸ್ಸಿನಲ್ಲಿ ಬಹಿರಂಗವಾಗಿ ಈ ವಿಚಾರವನ್ನು ಹೇಳಿಕೊಳ್ಳಲು ಭಯದ ವಾತವಾರಣವೇ ಕಾರಣ ಎಂದಿದ್ದಾರೆ.
ತಾಯಿಗೆ ಹೇಳಲು ಧೈರ್ಯ ಮಾಡಲಿಲ್ಲ
ಗುಪ್ತಾ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ಒಮ್ಮೆ ನಾನು ಕಣ್ಣಿನ ಸೋಂಕಿಗೆ ವೈದ್ಯರನ್ನು ಭೇಟಿ ಮಾಡಿದ್ದೆ. ನನ್ನ ಜೊತೆಗಿದ್ದ ನನ್ನ ಸಹೋದರನನ್ನು ಹೊರಗೆ ಕಳುಹಿಸಿದ್ದಾರೆ. ನಂತರ ವೈದ್ಯರು ನನ್ನ ಕಣ್ಣನ್ನು ಪರೀಕ್ಷಿಸಲು ಆರಂಭಿಸಿದರು. ಇದೇ ವೇಳೆ ನನ್ನ ಇತರ ಅಂಗಗಳನ್ನು ಪರೀಕ್ಷಿಸಲು ಮುಂದಾದರು. ಆದರೆ ಅದು ನನ್ನ ಕಣ್ಣಿಗೆ ಸಂಬಂಧಿಸಿಲ್ಲ. ಈ ವೇಳೆ ನನಗೆ ತುಂಬಾ ಭಯವಾಯಿತು. ಮನೆಗೆ ಹೋಗುವಾಗ ಅಸಹ್ಯವಾಯಿತು. ಇದರ ಬಗ್ಗೆ ನಾನು ತುಂಬಾ ಹೆದರಿಕೊಂಡಿದ್ದೆ. ನಾನು ಮನೆಯ ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದೆ. ಆದರೆ ನಾನು ಈ ಬಗ್ಗೆ ನನ್ನ ತಾಯಿಗೆ ಹೇಳಲು ಧೈರ್ಯ ಮಾಡಲಿಲ್ಲ. ಏಕೆಂದರೆ ನನಗೆ ಹೆದರಿಕೆಯಾಗಿತ್ತು. ಎಲ್ಲಿ ಅವರು ಅದು ನನ್ನ ತಪ್ಪು ಎಂದು ಬಿಡುತ್ತಾರೆ ಎಂದು ನಾನು ತುಂಬಾ ಭಯಪಡುತ್ತಿದ್ದೆ. ಅವನನ್ನು ಪ್ರಚೋದಿಸಲು ನಾನು ಬಹುಶಃ ಏನನ್ನಾದರೂ ಹೇಳಿದ್ದೇನೆ ಅಥವಾ ಮಾಡಿರಬಹುದು. ಇಂತಹ ಅನುಭವ ನನಗೆ ವೈದ್ಯರ ಬಳಿ ಅನೇಕ ಬಾರಿ ಆಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ
View this post on Instagram
ಈ ವಿಚಾರವಾಗಿ ಗುಪ್ತಾ ತನ್ನ ಸ್ನೇಹಿತರೊಂದಿಗೆ ಚರ್ಚೆ ನಡೆಸಬೇಕಾದರೆ ಈ ರೀತಿ ಅವರ ಜೀವನದಲ್ಲಿಯೂ ನಡೆದಿತ್ತು ಎಂಬುದನ್ನು ತಿಳಿಸಿದ್ದಾರೆ. ಗುಪ್ತಾ ಅವರು ಈ ಪುಸ್ತಕದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ವಿವಿಧ ಅಧ್ಯಾಯಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ವಿವ್ ರಿಚಡ್ರ್ಸ್ನೊಂದಿಗೆ ಆಕೆಯ ಮಗಳಾದ ಫ್ಯಾಶನ್ ಡಿಸೈನರ್ ಮಸಬಾ ಗುಪ್ತಾಳನ್ನು ಒಬ್ಬರೇ ಬೆಳೆಸುವಾಗ ಆಕೆ ತನ್ನ ವೃತ್ತಿಜೀವನದಲ್ಲಿ ಎದುರಿಸಿದ ಸಮಸ್ಯೆಗಳನ್ನು ಇಲ್ಲಿ ಮೆಲುಕು ಹಾಕುತ್ತಾರೆ.
View this post on Instagram
ತ್ರಿಕಾಲ್, ಮಂಡಿ ಮತ್ತು ಉತ್ಸವ್ ಸಿನಿಮಾಗಳಲ್ಲಿ ಗುಪ್ತಾ ಅವರು ನಟಿಸಿದ್ದು, ಈ ಸಿನಿಮಾಗಳು ಅವರಿಗೆ ಅಷ್ಟು ಮೆಚ್ಚುಗೆಯನ್ನು ತಂದುಕೊಂಡಲಿಲ್ಲ. ಅವರು ಯುವ ನಟಿಯಾಗಿ ಅಷ್ಟು ಗುರುತಿಸಿಕೊಳ್ಳಲಿಲ್ಲ. ಆದರೆ 2018 ರ ‘ಬಧಾಯಿ ಹೋ’ ಚಿತ್ರದ ಬ್ಲಾಕ್ಬಸ್ಟರ್ ನಿಂದ ಮತ್ತೆ ಇವರು ಕಮ್ ಬ್ಯಕ್ ಆಗಿದ್ದು, ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗುಪ್ತಾ ಅವರು ಶಂಕರ್ ನಾಗ್ ಜೊತೆಗೂ ನಟಿಸಿದ್ದರು.