ಚಾಮರಾಜನಗರ: ಹಸಿರಿನಿಂದ ಕಂಗೊಳಿಸುತ್ತಿರುವ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೈಲೂರು ವಲಯಗಳ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಂಡಿದ್ದು, ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುತ್ತಿವೆ.
ಪ್ರತಿ 12 ವರ್ಷಗಳಿಗೊಮ್ಮೆ ಅರಳುವ “ನೀಲಿಕುರುಂಜಿ” ಹೂಗಳು ಘಟ್ಟ ಪ್ರದೇಶಗಳಲ್ಲಿ ಅರಳಿ ನಿಂತಿದ್ದು, ಹಸಿರಿನ ಬೆಟ್ಟಕ್ಕೆ ನೀಲಿ ಚಾದರ ಹೊದಿಸಿವೆ. ಅಪರೂಪದ ಜೀವ ವೈವಿಧ್ಯ ತಾಣವಾಗಿರುವ ಬಿಆರ್‍ಟಿ ಪ್ರದೇಶದಲ್ಲಿ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಡನ್ನು ಭೂ ಲೋಕದ ಸ್ವರ್ಗವಾಗಿಸುತ್ತದೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
Advertisement
Advertisement
ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಹೂವನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತ ಕೇರಳ ಹಾಗೂ ತಮಿಳುನಾಡಿಗರು ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಬೆಟ್ಟದ ಹೂ ನೀಲಿಕುರುಂಜಿ ಸೊಬಗು ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಪರಿಚಯವಾದ ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ