ನವದೆಹಲಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಅದರಲ್ಲೂ ಸರ್ಕಾರಿ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಹೀಗೆ ಎಲ್ಲರೂ ಸರ್ಕಾರಿ ಉದ್ಯೋಗ ಬಯಸಿದರೇ ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ ಎಂದು ಆರ್‌ಎಸ್‍ಎಸ್ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಪ್ರಶ್ನಿಸಿದ್ದಾರೆ.
ವಿಜಯದಶಮಿ (Vijayadashami) ಹಿನ್ನೆಲೆ ನಾಗಪುರದ (Nagpur) ಆರ್‌ಎಸ್‍ಎಸ್ (RSS) ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 10, 20, 30% ರಷ್ಟು ಉದ್ಯೋಗಗಳಿದೆ. ಎಲ್ಲರೂ ಉದ್ಯೋಗ ಕೇಳಿದರೇ ನೀಡಲು ಸಾಧ್ಯವಿಲ್ಲ, ಉದ್ಯೋಗ ಸಿಗದಿದ್ದರೇ ತಮ್ಮ, ತಮ್ಮ ಬೇರೆ ಉದ್ಯೋಗಗಳನ್ನು ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಬೆಟ್ಟಿಂಗ್, ರಮ್ಮಿ ಚಟಕ್ಕೆ ಬಿದ್ದ ಎಂ.ಕಾಂ ಪದವೀಧರ – ಸಾಲ ತೀರಿಸಲು ಕಳ್ಳತನಕ್ಕಿಳಿದ
Advertisement
Advertisement
ಜನಸಂಖ್ಯೆಗೆ ಸಂಪನ್ಮೂಲಗಳು ಬೇಕಾಗುತ್ತವೆ, ಸಂಪನ್ಮೂಲಗಳನ್ನು ನಿರ್ಮಿಸದೇ ಬೆಳೆದರೆ, ಅದು ದೇಶಕ್ಕೆ ಹೊರೆಯಾಗುತ್ತದೆ, ಜನಸಂಖ್ಯೆಯನ್ನು ಆಸ್ತಿ ಎಂದು ಪರಿಗಣಿಸುವ ಮತ್ತೊಂದು ದೃಷ್ಟಿಕೋನವಿದೆ, ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡಬೇಕಾಗಿದೆ. ಜನರು ತಪ್ಪಿನ ವಿರುದ್ಧ ಧ್ವನಿ ಎತ್ತಬೇಕು, ಆದರೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.
Advertisement
ಈ ನಡುವೆ ಕೆಲವರು ನಮ್ಮಿಂದ ಅಲ್ಪಸಂಖ್ಯಾತರಿಗೆ ಅಪಾಯವಿದೆ ಎಂದು ಹೆದರಿಸುತ್ತಿದ್ದಾರೆ, ಇದು ಸಂಘದ ಅಥವಾ ಹಿಂದೂಗಳ ಸ್ವಭಾವವಲ್ಲ, ಸಹೋದರತ್ವ, ಸೌಹಾರ್ದತೆ ಮತ್ತು ಶಾಂತಿಯ ಪರವಾಗಿ ನಿಲ್ಲವುದು ಸಂಘದ ಸಂಕಲ್ಪ. ದೇವಸ್ಥಾನ, ನೀರು, ಸ್ಮಶಾನ ಎಲ್ಲರಿಗೂ ಸಮಾನವಾಗಿರಬೇಕು, ಅನುಕಂಪದ ವಿಷಯಗಳಿಗೆ ನಾವು ಜಗಳವಾಡಬಾರದು. ಯಾರೋ ಒಬ್ಬರು ಕುದುರೆ ಸವಾರಿ ಮಾಡಬಹುದು, ಅದು ಇನ್ನೊಬ್ಬರಿಗೆ ಸಾಧ್ಯವಿಲ್ಲ ಎನ್ನುವ ಮಾತುಗಳು ಸಮಾಜದಲ್ಲಿ ಸ್ಥಾನ ಪಡೆಯಬಾರದು. ಹಿಂದೂ ರಾಷ್ಟ್ರದ ಪರಿಕಲ್ಪನೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅನೇಕರು ಈ ಪರಿಕಲ್ಪನೆಯನ್ನು ಒಪ್ಪುತ್ತಾರೆ, ಆದರೆ ‘ಹಿಂದೂ’ ಪದವನ್ನು ವಿರೋಧಿಸುತ್ತಾರೆ, ಬೇರೆ ಪದಗಳನ್ನು ಬಳಸಲು ಬಯಸುತ್ತಾರೆ, ಅದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ, ಪರಿಕಲ್ಪನೆಯ ಸ್ಪಷ್ಟತೆಗಾಗಿ ನಾವೇ ಹಿಂದೂ ಪದಕ್ಕೆ ಒತ್ತು ನೀಡುತ್ತೇವೆ ಎಂದರು.
Advertisement
ಕೋವಿಡ್ (Covid) ನಂತರ ನಮ್ಮ ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುತ್ತಿದೆ, ವಿಶ್ವ ಅರ್ಥಶಾಸ್ತ್ರಜ್ಞರು ಭಾರತದ ಆರ್ಥಿಕತೆ ಮತ್ತಷ್ಟು ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಕ್ರೀಡೆಯಲ್ಲೂ ನಮ್ಮ ಆಟಗಾರರು ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ, ಬದಲಾವಣೆ ಪ್ರಪಂಚದ ನಿಯಮ, ಆದರೆ ಸನಾತನ ಧರ್ಮದಲ್ಲಿ ದೃಢವಾಗಿರಬೇಕು, ನಾವು ನಮ್ಮ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಮಹಿಳೆಯರಿಲ್ಲದೆ ಸಮಾಜ ಪ್ರಗತಿ ಹೊಂದಲು ಸಾಧ್ಯವಿಲ್ಲ. ಇದನ್ನೂ ಓದಿ: ನಿಂತಿದ್ದ ಅಂಬುಲೆನ್ಸ್‌ಗೆ ಕಾರು ಡಿಕ್ಕಿ – ಐವರು ಸಾವು, 12 ಮಂದಿಗೆ ಗಾಯ
ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಮತ್ತು ವಿಶ್ವಾಸಾರ್ಹತೆ ಹೆಚ್ಚಾಗಿದೆ, ನಾವು ಶ್ರೀಲಂಕಾಕ್ಕೆ ಸಹಾಯ ಮಾಡಿದ ರೀತಿ ಮತ್ತು ಉಕ್ರೇನ್-ರಷ್ಯಾ ಸಂಘರ್ಷದ ಸಮಯದಲ್ಲಿ ನಮ್ಮ ನಿಲುವು ಮಾದರಿಯಾಗಿದೆ. ವೃತ್ತಿಜೀವನಕ್ಕೆ ಇಂಗ್ಲಿಷ್ ಮುಖ್ಯ ಎಂಬುದು ಸುಳ್ಳು, ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಹೆಚ್ಚು ಸುಸಂಸ್ಕೃತರಾಗಲು ಕಾರಣವಾಗಬೇಕು, ದೇಶಪ್ರೇಮದಿಂದ ಪ್ರೇರೇಪಿಸಲ್ಪಟ್ಟ ಉತ್ತಮ ಮನುಷ್ಯರಾಗಬೇಕು, ಸಮಾಜ ಇದನ್ನು ಸಕ್ರಿಯವಾಗಿ ಬೆಂಬಲಿಸಬೇಕು.
ನಮ್ಮ ಸನಾತನ ಧರ್ಮಕ್ಕೆ ಅಡ್ಡಿಯುಂಟು ಮಾಡುವ ವಿಧದ ಅಡಚಣೆಯು ಭಾರತದ ಏಕತೆ ಮತ್ತು ಪ್ರಗತಿಗೆ ಪ್ರತಿಕೂಲವಾದ ಶಕ್ತಿಗಳಿಂದ ಸೃಷ್ಟಿಸಲ್ಪಟ್ಟಿದೆ, ಕೆಲವರು ನಕಲಿ ನಿರೂಪಣೆಗಳನ್ನು ಹರಡುತ್ತಿದ್ದಾರೆ, ಅರಾಜಕತೆಯನ್ನು ಪ್ರೋತ್ಸಾಹಿಸುತ್ತಾರೆ, ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ, ಭಯೋತ್ಪಾದನೆ, ಸಂಘರ್ಷ ಮತ್ತು ಸಾಮಾಜಿಕ ಅಶಾಂತಿಯನ್ನು ಹುಟ್ಟುಹಾಕುತ್ತಿದ್ದಾರೆ ಅದಕ್ಕಾಗಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು.