ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ (IT Sector) ಕಂಪನಿಗಳಿಂದ ಗುತ್ತಿಗೆದಾರರ (Contract Workers) ಮೂಲಕ ನೇಮಕಗೊಂಡ ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.7 ರಷ್ಟು ಕಡಿತಗೊಂಡಿದ್ದು, ಒಂದೇ ವರ್ಷದಲ್ಲಿ ಸುಮಾರು 60,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಸಂಸ್ಥೆ ಮಂಗಳವಾರ ತಿಳಿಸಿದೆ.
ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ನಡುವೆ ಭಾರತದಲ್ಲಿ ಐಟಿ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಸುಮಾರು 60 ಸಾವಿರ ಹೊರಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವುದಾಗಿ ನೇಮಕಾತಿ ಸಂಸ್ಥೆ ತಿಳಿಸಿದೆ.
Advertisement
Advertisement
ಐಟಿ ಕ್ಷೇತ್ರದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಕಡಿತಗೊಂಡಿರುವುದರಿಂದ ನೇಮಕಾತಿಗೂ ಹಿನ್ನಡೆಯಾಗಿದೆ ಎಂದು 120ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳನ್ನು ಪ್ರತಿನಿಧಿಸುವ ಭಾರತೀಯ ಸ್ಟಾಫಿಂಗ್ ಫೆಡರೇಷನ್ ಅಧ್ಯಕ್ಷ ಲೋಹಿತ್ ಭಾಟಿಯಾ ತಿಳಿಸಿದ್ದಾರೆ. ಇದರ ಹೊರತಾಗಿಯೂ ಉತ್ಪಾದನಾ ವಲಯ, ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವಲಯಗಳಲ್ಲಿ ದೇಶೀಯ ಗ್ರಾಹಕರ ಬೇಡಿಕೆಯಿಂದ ನೇಮಕಾತಿ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ – ಶೀಘ್ರವೇ ಕೇಂದ್ರ ತರಲಿದೆ ಟ್ರ್ಯಾಕಿಂಗ್ ಸಿಸ್ಟಮ್
Advertisement
Advertisement
ಸುಮಾರು 194 ಶತಕೋಟಿ ಡಾಲರ್ ವ್ಯಾವಹಾರಿಕಾ ವಲಯವು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚೇತರಿಸಿಕೊಂಡಿದ್ದು. ಆ ಸಮಯದಲ್ಲಿ ಜನ ರಿಮೋರ್ಟ್ ಸಿಸ್ಟಮ್, ಆನ್‌ಲೈನ್ ಶಾಪಿಂಗ್ ಹಾಗೂ ಇನ್ನಿತರ ಸಾಫ್ಟ್‌ವೇರ್ ಸೇವೆಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದರಿಂದ ಅಭಿವೃದ್ಧಿಗೆ ಸಹಾಯ ಮಾಡಿತ್ತು. ಈ ವರ್ಷ ಉದ್ಯೋಗಿಗಳು ಕಚೇರಿಗಳಿಗೆ ಮರಳುತ್ತಿರುವುದರಿಂದ ಸಾಫ್ಟ್‌ವೇರ್ ವಯಲಕ್ಕೆ ಪೆಟ್ಟು ಬಿದ್ದಂತಾಗಿದೆ. ಜೊತೆಗೆ ರಷ್ಯಾ-ಉಕ್ರೇನ್ ನಡುವಿನ ಯುದ್ಧವೂ ಐಟಿ ಕ್ಷೇತ್ರ ಬೆಳವಣಿಗೆ ಪೆಟ್ಟು ನೀಡಿರುವುದಾಗಿ ಭಾಟಿಯಾ ಹೇಳಿದ್ದಾರೆ.
ಐಟಿ ವಲಯದಲ್ಲಿ ಹೊರಗುತ್ತಿಗೆ ನೌಕರರ ನೇಮಕವು ಮಾರ್ಚ್ ತ್ರೈಮಾಸಿಕದಿಂದ ಶೇ.6 ರಷ್ಟು ಕಡಿತಗೊಂಡಿದೆ. ಇದರಿಂದಾಗಿ ಏಪ್ರಿಲ್ ವೇಳೆಗೆ ದೇಶದಲ್ಲಿ ನಿರುದ್ಯೋಗ ದರವು ಶೇ.7.8 ರಿಂದ ಶೇ.8.11ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ (CMIE) ತಿಳಿಸಿದೆ. ಇದನ್ನೂ ಓದಿ: ವೊಡಾಫೋನ್‌ನಲ್ಲಿ ಶೇ.33ರಷ್ಟು ಕೇಂದ್ರದ ಪಾಲು – ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ