– ಮಹಾಮೈತ್ರಿ ಸಭೆಗೆ ಬಿಜೆಪಿ ಟೀಕೆ – ಎನ್‌ಡಿಎ ದೋಸ್ತಿಗೆ ಓಕೆ ಅಂತಾರಾ ದಳಪತಿ?
ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ (Narendra Modi) ಕಟ್ಟಿಹಾಕಲು ಹೊರಟಿರೋ ವಿಪಕ್ಷಗಳು ಬೆಂಗಳೂರಲ್ಲಿ (Bengaluru) ಭರ್ಜರಿ ಶಕ್ತಿಪ್ರದರ್ಶನ ನಡೆಸ್ತಿವೆ.
ಸೋಮವಾರ (ಜು. 17) 26 ಪಕ್ಷಗಳ ಪ್ರಮುಖರು ಮಹಾಮೈತ್ರಿ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದ್ರೆ ವಿಪಕ್ಷಗಳ ನಾಯಕತ್ವ ಯಾರು ಹೊರಲಿದ್ದಾರೆ ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಎನ್‌ಡಿಎ ಜೊತೆ ಮೈತ್ರಿಗೆ ಜೆಡಿಎಸ್ ರೆಡಿ – ಬಿಜೆಪಿ ಪ್ಲಾನ್ ಏನು?
Advertisement
Advertisement
ಮೋದಿ ಎಂಬ ಅಶ್ವಮೇಧವನ್ನ ಕಟ್ಟಿಹಾಕಲು ಸಮರ್ಥ ನಾಯಕತ್ವ ಬೇಕಿದೆ. ಸಂಘಟನಾತ್ಮಕವಾಗಿ ದೇಶಾದ್ಯಂತ ಭದ್ರ ಬೇರು ಹೊಂದಿರೋ ಬಿಜೆಪಿಗೆ ಟಕ್ಕರ್ ಕೊಡುವಂತಹ ಪಕ್ಷ ವಿಪಕ್ಷಗಳ ಮೈತ್ರಿಕೂಟದ ನಾಯಕತ್ವ ಜವಾಬ್ದಾರಿ ಹೊರಬೇಕಿದೆ. ವಿಪಕ್ಷಗಳಲ್ಲೇ ಅತೀ ಹೆಚ್ಚು ಸಂಸದರನ್ನು ಹೊಂದಿರೋ ಕಾಂಗ್ರೆಸ್ ಸಹಜವಾಗಿಯೇ ನಾಯಕತ್ವದ ನಿರೀಕ್ಷೆ ಇಟ್ಟುಕೊಂಡಿದೆ. ಹೀಗಾಗಿಯೇ ಬೆಂಗಳೂರಲ್ಲಿ ಭರ್ಜರಿ ಆತಿಥ್ಯ ನೀಡಿದೆ. ಆದ್ರೆ ಕಾಂಗ್ರೆಸ್‌ನ (C0ngress) ಈ ಆಸಗೆ ವಿಪಕ್ಷಗಳು ಒಪ್ಪುತ್ತಾ ಎಂಬುದು ಇಂದಿನ ಸಭೆ ಬಳಿಕ ತಿಳಿಯಲಿದೆ.
Advertisement
ಮೋದಿ ನೇತೃತ್ವದ ಬಿಜೆಪಿ ಸೋಲಿಗೆ ಎಲ್ಲರನ್ನು ಒಗ್ಗೂಡಿಸ್ತಿರೋ ಕಾಂಗ್ರೆಸ್‌ಗೆ ತ್ಯಾಗದ ಅನಿವಾರ್ಯತೆ ಎದುರಾಗಲಿದೆ. ವಿಪಕ್ಷಗಳ ನಾಯಕತ್ವ ಸಿಕ್ಕರೂ-ಸಿಗದಿದ್ದರು ಆಯಾ ರಾಜ್ಯಗಳ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡರೇ ಮಾತ್ರ ಮಹಾಘಟ್‌ಬಂಧನ್ ಗಟ್ಟಿಯಾಗಿರಲಿದೆ. ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಸೀಟು ಬಿಟ್ಟುಕೊಡಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಬರಬಹುದು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ವಿರೋಧಿಗಳ ರಣಕಹಳೆ – ಯಾವೆಲ್ಲ ಪಕ್ಷಗಳು ಭಾಗಿ ಆಗುತ್ತಿವೆ?
Advertisement
ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ಗಿಂತಲೂ ಪ್ರಾದೇಶಿಕ ಪಕ್ಷಗಳು ಹೆಚ್ಚು ಬಲಾಢ್ಯವಾಗಿವೆ. ಇಲ್ಲೆಲ್ಲಾ ಕಾಂಗ್ರೆಸ್ ಉತ್ತಮ ಸಂಘಟನೆ ಹೊಂದಿದ್ದರೂ ಅನಿವಾರ್ಯವಾಗಿ ಸೀಟುಗಳನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕಿದೆ. ಅಲ್ಲದೇ ವಿಪಕ್ಷಗಳ ನಾಯಕತ್ವ ಸಿಗದಿದ್ದರೂ ಮೈತ್ರಿಕೂಟಕ್ಕೆ ಬೆಂಬಲಿಸಬೇಕಾದ ಸನ್ನಿವೇಶ ಕಾಂಗ್ರೆಸ್‌ಗೆ ಇದೆ.
ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳು ಸಭೆ ಸೇರುತ್ತಿರುವ ಹೊತ್ತಲ್ಲೇ ಎನ್‌ಡಿಎ ಸಭೆ ಕೂಡ ನಿಗದಿ ಆಗಿರೋದು ಕುತೂಹಲ ಕೆರಳಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಸೋಲಿನಿಂದ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಯಲ್ಲಿ ಎಡವಟ್ಟು ಆಗಬಾರದು ಎಂದು ಫುಲ್ ಅಲರ್ಟ್ ಆಗಿದೆ. ಹೀಗಾಗಿಯೇ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲು ಕೇಸರಿ ಪಡೆ ಮುಂದಾಗಿದೆ.
ದೋಸ್ತಿಗೆ ಓಕೆ ಅಂತಾರಾ ದಳಪತಿ..?
ಇಂದಿನ ಸಭೆಗೆ 38 ಪಕ್ಷಗಳಿಗೆ ಆಹ್ವಾನ ಕೊಡಲಾಗಿದೆ. ಸ್ವತಃ ಜೆ.ಪಿ ನಡ್ಡಾ ಪತ್ರ ಬರೆದು ಹಾಲಿ ಮಿತ್ರ ಪಕ್ಷಗಳ ಜೊತೆಗೆ ಎನ್‌ಡಿಎ ಬಿಟ್ಟು ಹೋಗಿರುವ ಹಳೆ ಮಿತ್ರ ಪಕ್ಷಗಳಿಗೆ ಹಾಗೂ ಮೋದಿ ನಾಯಕತ್ವದಡಿ ಹೊಸದಾಗಿ ಸೇರಲು ಬಯಸಿರುವ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಇಂದು ನವದೆಹಲಿಯ ಅಶೋಕ ಹೋಟೆಲ್‌ನಲ್ಲಿ ಮಹತ್ವದ ಎನ್‌ಡಿಎ ಸಭೆ ನಡೆಯಲಿದೆ. ದೆಹಲಿಯಲ್ಲಿ ಮಾತನಾಡಿದ ಜೆಪಿ ನಡ್ಡಾ, ಮೋದಿ ಆಡಳಿತ ಕಂಡು ಹಲವು ಪಕ್ಷಗಳು ಎನ್‌ಡಿಎ ಭಾಗವಾಗಲು ಉತ್ಸುಕತೆ ತೋರಿಸ್ತಿವೆ. ಎನ್‌ಡಿಎ ಇರೋದೇ ದೇಶ ಸೇವೆ ಮಾಡಲು. ಆದ್ರೆ ಯುಪಿಎ ಅಂತಹ ಉದ್ದೇಶ ಹೊಂದಿಲ್ಲ ಎಂದಿದ್ದಾರೆ. ಯುಪಿಎಗೆ ನಾಯಕನೇ ಇಲ್ಲ. ಇನ್ನು ಹೇಗೆ ನಿರ್ಣಯ ತಗೋತಾರೆ ಎಂದು ಲೇವಡಿ ಮಾಡಿದ್ದಾರೆ.
Web Stories