– ಕುಮಾರಣ್ಣ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ
ರಾಮನಗರ: 5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ? ಹಾಲಿನ ಬೆಂಬಲ ಬೆಲೆ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದಾರೆ. ಕೋವಿಡ್ 2ನೇ ಹಂತದಲ್ಲಿ ರಾಮನಗರ ಚನ್ನಪಟ್ಟಣದಲ್ಲಿ (Chnnapatna) ಪ್ರತಿ ಕುಟುಂಬಕ್ಕೆ ಕುಮಾರಣ್ಣ ಅವರು ರೇಷನ್ ಕಿಟ್ ಹಂಚಿದ್ರು. ಕಾಂಗ್ರೆಸ್ ನಾಯಕರು ಮಹದೇವಪ್ಪ ನಿಂಗೂ ಫ್ರೀ… ಕಾಕಾ ಪಾಟೀಲ್ ನಿನಗೂ ಫ್ರೀ… ಕಾಂಗ್ರೆಸ್ಸನ್ನು ನಂಬಿದರೆ ಏನಾಗುತ್ತೆ ಅನ್ನೋದಕ್ಕೆ ಜನರಿಗೆ ಇದೊಂದು ಅದ್ಭುತ ಪಾಠ ಎಂದು ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದರು.
Advertisement
ಒಂದು ಅವಕಾಶ ಕೊಡಿ
2 ಚುನಾವಣೆಗಳಲ್ಲಿ ನನ್ನನ್ನ ಕುತಂತ್ರದಿಂದ ಸೋಲಿಸಿದ್ರು. ರಾಮನಗರದಲ್ಲಿ ಗಿಫ್ಟ್ ಕೊಟ್ಟಿ ಸೋಲಿಸಿದ್ರು. ಈಗಲೂ ರಾತ್ರಿ 4 ಗಂಟೆಗೆ ಬಂದು ಕೂಪನ್ ಕೊಡಬಹುದು. ರೆಷನ್ ಕಾರ್ಡ್ ಕೂಪನ್ ಕೊಡ್ತಾರೆ, ಇದು ಕಾಂಗ್ರೆಸ್ ನಾಯಕರ ಗಿಫ್ಟಾ? ನನಗೆ ಈಗ ಒಂದು ಅವಕಾಶ ಕೊಡಿ ಎಂದು ನಿಖಿಲ್ ಮನವಿ ಮಾಡಿದ್ರು.
Advertisement
ನೀರಾವರಿ ಯೋಜನೆಗೆ ಭದ್ರಬುನಾದಿ ಹಾಕಿರೋದು ಮಾಜಿ ಪ್ರಧಾನಿ ದೇವೇಗೌಡರು. ಸತ್ಯಗಾಲ ಮಂಚಿನಬೇಲಿ ಸೇರಿದಂತೆ ಹಲವು ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಮಾಡಬೇಕಂತ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದರು. ಅದಕ್ಕಾಗಿಯೇ ಕುಮಾರಣ್ಣ ಅವರು ರಾಮನಗರಕ್ಕೆ ರಾಜೀನಾಮೆ ಕೊಟ್ಟು ಚನ್ನಪಟ್ಟಣ ಉಳಿಸಿಕೊಂಡರು.
Advertisement
Advertisement
ಕುಮಾರಣ್ಣ ಚನ್ನಪಟ್ಟಣ ಅಭಿವೃದ್ಧಿಗೆ ಒಂದೂವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ. ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನ ಮಾಡಿದ್ದಾರೆ. 150 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ರೇಷ್ಮೆ ಮಾರುಕಟ್ಟೆ ಮಾಡೋದಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಇದೆ ಎಂದು ತಿಳಿಸಿದರು.
ಹಾಸನದಲ್ಲಿ ಹುಟ್ಟಿದ್ದಾರೆ ರಾಮನಗರಕ್ಕೆ ಏನ್ ಸಂಬಂದ ಅಂತ ವಿರೋಧಿಗಳು ಹೇಳ್ತಾರೆ. ಅಧಿಕಾರ ಇರಲಿ ಬಿಡಲಿ ಜನರ ಸಂಪರ್ಕ ಹೊಂದಿದ್ದೇವೆ. ರಾಮನಗರ ಜಿಲ್ಲಾದ್ಯಂತ ಅನೇಕ ಕಾಮಾಗಾರಿಗಳು ಕುಮಾರಣ್ಣನ ಕಾಲದಲ್ಲಿ ಆಗಿದೆ ಎಂದು ಸಾಧನೆಗಳನ್ನು ಬಣ್ಣಿಸಿದರು.
25,000 ಜನಕ್ಕೆ ಉದ್ಯೋಗ:
ರಾಮನಗರ ಮತ್ತು ಮಂಡ್ಯದ ಮಧ್ಯ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಸರಣಿ ಸಭೆ ಮಾಡ್ತಿದ್ದಾರೆ. 25 ಸಾವಿರ ಜನಕ್ಕೆ ಉದ್ಯೋಗವಕಾಶ ಕಲ್ಪಿಸಲಾಗುತ್ತೆ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ರು. ಈ ಭಾಗದಲ್ಲಿ ಕಾರ್ಖಾನೆ ತಂದು ಸ್ಥಾಪನೆ ಮಾಡ್ತಿವಿ ಉದ್ಯೋಗ ಸೃಷ್ಟಿ ಮಾಡ್ತೀವಿ. ನಿಮ್ಮ ಮನೆಯ ಮಗನಾಗಿ ಜೊತೆಯಲ್ಲಿದ್ದು ಕೆಲಸ ಮಾಡ್ತಿನಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದ್ರು.