– ಜೀವಿಕಾ ಕಾರ್ಮಿಕರಿಗೆ ತಿಂಗಳಿಗೆ 30,000 ರೂ. ವೇತನ ಭರವಸೆ
– ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೆರವು
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ (Bihar Assembly Elections) ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಚುನಾವಣಾ ಪ್ರಚಾರ ಕಣ ಬಿರುಸಾಗಲಿದೆ.
ಈ ನಡುವೆ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ನೇತೃತ್ವದ ಎನ್‌ಡಿಎ ಒಕ್ಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಪ್ರಯತ್ನದಲ್ಲಿದ್ದರೆ, ಮತ್ತೊಂದು ಆರ್‌ಜೆಡಿ ನೇತೃತ್ವದ ಇಂಡಿಯಾ ಒಕ್ಕೂಟ ಎನ್‌ಡಿಎ ಮಣಿಸುವ ಲೆಕ್ಕಚಾರದಲ್ಲಿದೆ. ಈ ನಡುವೆ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಜನ್ ಸ್ವರಾಜ್ ಪಕ್ಷವೂ ಅಧಿಕಾರ ಹಿಡಿಯುವ ಹುರುಪುನಲ್ಲಿದ್ದು ಚುನಾವಣೆಗೆ ಹತ್ತಾರು ಭರವಸೆಗಳನ್ನು ನೀಡಿವೆ. ಇದನ್ನೂ ಓದಿ: Bihar Election| ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ
ಆರ್‌ಜೆಡಿ ನೇತೃತ್ವದ ಇಂಡಿಯಾ ಮೈತ್ರಿಕೂಟವೂ ಜೀವಿಕಾ ಕಾರ್ಮಿಕರಿಗೆ ತಿಂಗಳಿಗೆ 30,000 ರೂ. ವೇತನ ಹಾಗೂ ಖಾಯಂ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದೆ. ಅಲ್ಲದೇ ಪ್ರತಿ ಮನೆಗೆ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ತೇಜಸ್ವಿ ಯಾದವ್ ನೀಡಿದ್ದಾರೆ. ‘ಮಾಯಿ ಬಹಿನ್ ಮಾನ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂ. ನೆರವು, ಮೀಸಲಾತಿ ಪ್ರಸ್ತುತ ಶೇ. 50 ರಷ್ಟು ಮಿತಿ ಹೆಚ್ಚಿಸುವುದು ಮತ್ತು ಬಿಹಾರದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದೆ.
ಎನ್‌ಡಿಎ ಒಕ್ಕೂಟವು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಜಾರಿ ಮಾಡಿದೆ. ಇದರ ಮೂಲಕ ವ್ಯವಹಾರಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುವುದು. ಇದರ ಭಾಗವಾಗಿ ಈಗಾಗಲೇ ಆರಂಭಿಕ 10,000 ರೂ. ಅನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. ಜೊತೆಗೆ ಕೃಷಿ, ಕರಕುಶಲ ವಸ್ತುಗಳು, ಟೈಲರಿಂಗ್ ಇತ್ಯಾದಿಗಳಿಗೆ 2 ಲಕ್ಷದವರೆಗೆ ಹೆಚ್ಚುವರಿ ನೀಡಲಾಗುತ್ತದೆ. ಇದನ್ನೂ ಓದಿ: ಮಹಾಘಟಬಂಧನ್‌ನಲ್ಲಿ ಮುಂದುವರಿದ ಬಿಕ್ಕಟ್ಟು – 24 ಗಂಟೆಯಲ್ಲಿ ಸ್ಪಷ್ಟನೆ ಸಿಗುತ್ತೆ: ತೇಜಸ್ವಿ ಯಾದವ್
ಆಗಸ್ಟ್ 1 ರಿಂದ ಪ್ರತಿ ಮನೆಗೆ 125 ಯೂನಿಟ್ ಉಚಿತ ವಿದ್ಯುತ್, ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯತ ಭಟ್ಟ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ 1,000 ರೂ. ಮಾಸಿಕ ಭತ್ಯೆ ಮತ್ತು ವೃದ್ಧಾಪ್ಯ ವೇತನ 1,100 ರೂ. ನೀಡಲಾಗವುದು ಎಂದು ಹೇಳಿದೆ.
ಪ್ರಶಾಂತ್ ಕಿಶೋರ್ ಅವರ ಜನ್ ಸ್ವರಾಜ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮದ್ಯ ನಿಷೇಧವನ್ನು ತೆಗೆದುಹಾಕುವ ಭರವಸೆ ನೀಡಿದೆ. 60 ವರ್ಷ ಮೇಲ್ಪಟ್ಟವರಿಗೆ, ಪುರುಷರು, ಮಹಿಳೆಯರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಮೂಲಭೂತ ಅಗತ್ಯಗಳಿಗಾಗಿ ಮಾಸಿಕ 2,000 ರೂ.ಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. ಒಂದು ವರ್ಷದೊಳಗೆ ವಲಸಿಗರಿಗೆ ಪರಿಹಾರ, ಪುನರ್ವಸತಿ ಮತ್ತು ಉದ್ಯೋಗಕ್ಕಾಗಿ ಹೊಸ ಇಲಾಖೆಯನ್ನು ಸ್ಥಾಪಿಸುವುದು.
ಸರ್ಕಾರಿ ಶಾಲೆಗಳು ಸುಧಾರಿಸುವವರೆಗೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿ ಮತ್ತು ಅವರ ಶುಲ್ಕವನ್ನು ಪಾವತಿಸುವುದು, ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರನ್ನು ಕಾರ್ಮಿಕ ಮುಕ್ತ ಎಂದು ಘೋಷಿಸುವ ಹಾಗೂ ಸ್ವಾವಲಂಬಿ ನಾಗರಿಕರಿಗೆ ಪ್ರಸ್ತುತ 10-12% ಬದಲು 4%ನಷ್ಟು ಬಡ್ಡಿದರದಲ್ಲಿ ಸಾಲ ಒದಗಿಸುವ ಘೋಷಣೆ ಮಾಡಿದೆ.