ಮುಂಬೈ: ಎನ್‍ಸಿಪಿ (NCP) ನಾಯಕ ಶರಾದ್ ಪವಾರ್‌ಗೆ (Sharad Pawar) ಫೋನ್ ಕರೆ ಮಾಡಿ ಜೀವ ಬೆದರಿಕೆ (Death Threat) ಹಾಕಿರುವ ಬಗ್ಗೆ ಬಿಹಾರದಲ್ಲಿ ಕೇಸ್ ದಾಖಲಾಗಿದೆ.
ಶರಾದ್ ಪವಾರ್ ಅವರ ಸಿಲ್ವರ್ ಓಕ್ ರೆಸಿಡೆನ್ಸಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮುಂಬೈನಲ್ಲಿ (Mumbai) ನಿಮ್ಮನ್ನು ಗನ್‍ನಿಂದ ಸುಟ್ಟು ಕೊಲ್ಲುತ್ತೇನೆ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಶರದ್ ಪವಾರ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ
ಈ ಸಂಬಂಧ ಐಪಿಸಿ ಸೆಕ್ಷನ್ 294 (ಅಶ್ಲೀಲ ಪದಗಳ ಬಳಕೆ), 506 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಹಿಂದೆ ಕೂಡ ಶರಾದ್ ಪವಾರ್‌ಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿಂದೆ ಕೂಡ ಅವರ ಸಿಲ್ವರ್ ಓಕ್ ನಿವಾಸಕ್ಕೆ ಫೋನ್ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದೀಗ ಎರಡನೇ ಬಾರಿ ಜೀವ ಬೆದರಿಕೆ ಕರೆ ಬಂದಿದೆ. ಹಾಗಾಗಿ ಪೊಲೀಸರು ಸೂಕ್ತ ತನಿಖೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ
ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರಿಗೆ ನೀಡಿರುವ ದೂರಿನಲ್ಲಿ 20 ರಿಂದ 25 ಬಾರಿ ಇಂತಹ ಕರೆಗಳು ಬಂದಿವೆ. ಈ ತೊಂದರೆಯಿಂದ ಮುಕ್ತಿ ನೀಡುವಂತೆ ಕೋರಿದ್ದಾರೆ. ಎನ್‍ಸಿಪಿ ನಾಯಕರ ಕಚೇರಿ ಮತ್ತು ಭದ್ರತಾ ವಿವರಗಳು ಈ ಹಿಂದೆ ಕರೆ ಮಾಡಿದವರ ಬಗ್ಗೆ ಗಾಮ್‍ದೇವಿ ಪೊಲೀಸ್ ಠಾಣೆ ಮತ್ತು ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಕಚೇರಿಗೆ ದೂರು ನೀಡಲಾಗಿದೆ. ಕರೆ ಮಾಡಿದವರು ಮಾನಸಿಕವಾಗಿ ಅಸ್ವಸ್ಥನಂತೆ ಕಂಡು ಬರುತ್ತಿದೆ. ಶರದ್ ಪವಾರ್ ನಿವಾಸಕ್ಕೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಎನ್‍ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.