ಟಾಲಿವುಡ್‌ನ ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಅವರ ಪುತ್ರ ನಾಗಚೈತನ್ಯ (Naga Chaitanya) ನಟನೆಯ 24ನೇ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಶುರುವಾಗಿದೆ. ಸದ್ಯ ಈ ಸಿನಿಮಾ ಎನ್‌ಸಿ24 ವರ್ಕಿಂಗ್ ಟೈಟಲ್‌ನಲ್ಲಿ ಚಿತ್ರೀಕರಣ ಆರಂಭವಾಗಿದೆ. ಈ ಸಿನಿಮಾ ತಂಡದಿಂದ ಬೊಂಬಾಟ್ ನ್ಯೂಸ್‌ವೊಂದು ರಿವೀಲ್ ಆಗಿದೆ.
ನಾಗಚೈತನ್ಯ ನಟನೆಯ 24ನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಲಿದೆ ಚಿತ್ರತಂಡ. ಅಂದಹಾಗೆ ಇದೇ ನವೆಂಬರ್ 23ರಂದು ನಾಗಚೈತನ್ಯ ಅವ್ರ ಹುಟ್ಟುಹಬ್ಬವಿದ್ದು, ಇದೇ ದಿನ ಸಿನಿಮಾದ ಫಸ್ಟ್ ಲುಕ್ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಮೈಥಾಲಾಜಿಕಲ್ ಹಾಗೂ ಅಡ್ವೆಂಚರಸ್ ಸಿನಿಮಾ ಇದಾಗಿದ್ದು, ಈ ಸಿನಿಮಾದ ಕಥೆಯನ್ನ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಬರೆದಿದ್ದು, ಕಾರ್ತಿಕ್ ದಂಡು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಮೌಳಿಯ ʻವಾರಣಾಸಿʼಯಲ್ಲಿ ಹನುಮಂತನಾಗಿ ಕಿಚ್ಚ ಸುದೀಪ್?
ಅಂದಹಾಗೆ ನಾಗಚೈತನ್ಯ ಅವರ ಎನ್‌ಸಿ-24 ಸಿನಿಮಾಗೆ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ 2026ರಲ್ಲಿ ಅದ್ಧೂರಿಯಾಗಿ ತೆರೆಗೆ ಬರಲು ಎಲ್ಲಾ ತಯಾರಿಯನ್ನ ಮಾಡಿಕೊಂಡಿದೆ.

