ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್

Public TV
1 Min Read
nayanatara

ಪ್ರಸ್ತುತ ಟಾಲಿವುಡ್‌ನಲ್ಲಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ಹಾಟ್ ಟಾಪಿಕ್ ಆಗಿದ್ದು, ಈ ಜೋಡಿ ತಮ್ಮದೇ ಲೋಕದಲ್ಲಿ ಖುಷ್ ಆಗಿ ಇದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಈ ಜೋಡಿ ತಮ್ಮ ಅಪ್ಡೇಟ್ ಬಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈಗ ವಿಘ್ನೇಶ್ ವಿಶೇಷ ವೀಡಿಯೋ ಶೇರ್ ಮಾಡಿದ್ದು, ಅಭಿಮಾನಿಗಳು ನೋಡಿ ಖುಷ್ ಆಗಿದ್ದಾರೆ. ವೀಡಿಯೋ ಮೂಲಕ ನಯನತಾರಾಗೆ ಏನು ಮಾಡಿದರೆ ನನಗೆ ಖುಷಿ ಸಿಗುತ್ತೆ ಎಂದು ಬರೆದುಕೊಂಡಿದ್ದಾರೆ.

FotoJet 2 15

ಇನ್‌ಸ್ಟಾಗ್ರಾಮ್‌ನಲ್ಲಿ ವಿಘ್ನೇಶ್, ಇದು ಚೆನ್ನಾಗಿ ತಿನ್ನುವ ಸಮಯವಾಗಿದೆ. ನನಗೆ ನಯನತಾರಾಗೆ ಲೋಕಲ್ ಫುಡ್ ತಿನ್ನಿಸುವುದು ಎಂದರೆ ನನಗೆ ತುಂಬಾ ಇಷ್ಟ. ಅದರಲ್ಲಿಯೂ ನನ್ನ ನೆಚ್ಚಿನ ರೆಸ್ಟೋರೆಂಟ್‌ನಿಂದ ಸೀ ಫುಡ್ ತಿನ್ನಿಸುವುದು ಎಂದರೆ ನನಗೆ ಇಷ್ಟ. ನಾವು ತಿನ್ನುವುದನ್ನು ಆನಂದಿಸುವ ಏಕೈಕ ಸ್ಥಳ, ರುಚಿಕರವಾದ ಆಹಾರ ಮತ್ತು ಅದ್ಭುತ ಜನರೊಂದಿಗೆ ಈ ಉತ್ತಮ ಮನೆಯಲ್ಲಿ ನಾನು ಸಮಯ ಕಳೆಯುತ್ತಿದ್ದೇನೆ ಎಂದು ಬರೆದು ವಿಶೇಷ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಪವರ್ ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಉಡುಪಿಯ ಅಕ್ಷತಾ 

ಈ ವೀಡಿಯೋದಲ್ಲಿ ನಯನತಾರಾಗೆ ವಿಘ್ನೇಶ್ ಊಟ ತಿನ್ನಿಸುವ ವೇಳೆ ಆಕೆ ನಗುತ್ತ ನಾಚಿಕೊಳ್ಳುವುದು ಉತ್ತಮವಾದ ಭಾಗವಾಗಿದೆ. ವೀಡಿಯೋ ನೋಡಿದ ಅಭಿಮಾನಿಗಳು ಸೂಪರ್ ಜೋಡಿ, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ನಯನತಾರಾ ನಟನೆಯ ವಿಘ್ನೇಶ್ ನಿರ್ದೇಶನದ ‘ಕಾತುವಕುಲಾ ರೆಂಡು ಕಾದಲ್’ ಸಿನಿಮಾ ರಿಲೀಸ್ ಆಗಿದ್ದು, ಇವರ ಪ್ರಯತ್ನಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನಂತರ ಈ ಜೋಡಿ ಜೂನ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *