ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanathara) ಅವರು ‘ಜವಾನ್’ (Jawan) ಚಿತ್ರದ ಸಕ್ಸಸ್ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಆದರೂ ನಯನತಾರಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಇದರ ನಡುವೆ ಹೊಸ ವಿಚಾರವೊಂದು ನಟಿಯ ಬಗ್ಗೆ ಹರಿದಾಡುತ್ತಿದೆ. 100 ಕೋಟಿ ರೂ. ಕೊಟ್ರು ನಿಮ್ಮ ಜೊತೆ ನಟಿಸಲ್ಲ ಎಂದು ನಯನತಾರಾ ರಿಜೆಕ್ಟ್ ಮಾಡಿರುವ ಚಿತ್ರದ ಬಗ್ಗೆ ಈಗ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಯಾರು ಆ ಹೀರೋ? ಯಾವುದು ಆ ಸಿನಿಮಾ? ಇಲ್ಲಿದೆ ಮಾಹಿತಿ.

2 ವರ್ಷಗಳ ಹಿಂದೆ ‘ದಿ ಲೆಜೆಂಡ್’ (The Legend) ಎಂದು ಸಿನಿಮಾ ಬಂದಿತ್ತು. ಈ ಚಿತ್ರಕ್ಕೆ ಸರವಣನ್, ನಟ ಕಮ್ ನಿರ್ಮಾಪಕರಾಗಿದ್ದರು. ನೀರಿನ ಹಾಗೇ ಚಿತ್ರಕ್ಕೆ ಹಣ ಸುರಿದಿದ್ದರು. ಪ್ರಚಾರಕ್ಕಾಗಿಯೇ ಕೋಟಿ ಕೋಟಿ ಖರ್ಚು ಮಾಡಿದ್ದರು. ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಮಕಾಡೆ ಮಲಗಿತ್ತು.

ಬಳಿಕ ನಯನತರಾ ಬದಲು ‘ಐರಾವತ’ ಬೆಡಗಿ ಊರ್ವಶಿಗೆ ಸರವಣನ್ ಮಣೆ ಹಾಕಿದ್ದರು. ಸಿನಿಮಾಗೆ 20 ಕೋಟಿ ರೂ. ಸಂಭಾವನೆ ಪಡೆದು ಸರವಣನ್‌ಗೆ ಊರ್ವಶಿ ನಾಯಕಿಯಾಗಿ ನಟಿಸಿದ್ದರು. ವಿಪರ್ಯಾಸ ಅಂದರೆ ಹೀರೋಯಿನ್‌ಗೆ ಸಂಭಾವನೆ ಕೊಟ್ಟಷ್ಟು ಕೂಡ ಚಿತ್ರ ಗಳಿಕೆ ಕಂಡಿರಲಿಲ್ಲ. ಹಾಗಾಗಿ ನಯನತಾರಾ ಅಂದು ಮಾಡಿದ್ದು ಸರಿಯಾಗಿದೆ ಎಂದು ಲೇಡಿ ಸೂಪರ್ ಸ್ಟಾರ್‌ಗೆ ಫ್ಯಾನ್ಸ್ ಬೆಂಬಲಿಸುತ್ತಿದ್ದಾರೆ.


