ಬಾಹುಬಲಿ ಶಿವಗಾಮಿ ರೀತಿ ನೀರಿನಲ್ಲಿ ಮುಳುಗಿ ಮಕ್ಕಳನ್ನು ಎತ್ತಿದ ನಯನತಾರಾ ಪತಿ

Public TV
1 Min Read
nayanathara

ಕಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ನಯನತಾರಾ (Nayanthara) ಮತ್ತು ವಿಘ್ನೇಶ್ (Vignesh Shivan) ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವ ತಂದೆಯಂದಿರ ದಿನದಂದು ವಿಶೇಷ ಫೋಟೋವನ್ನು ಹಂಚಿಕೊಂಡು ಬಾಹುಬಲಿ (Bahubali) ದೃಶ್ಯವನ್ನು ನಯನತಾರಾ ಪತಿ ಮರುಸೃಷ್ಟಿಸಿದ್ದಾರೆ. ಇದನ್ನೂ ಓದಿ:ಆ್ಯನಿಮೇಷನ್ ಪಾತ್ರದ ಲುಕ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

nayanathara twins1ಈ ಚಿತ್ರದಲ್ಲಿ ರಮ್ಯಕೃಷ್ಣರವರು ಶಿವಗಾಮಿ ಪಾತ್ರದಲ್ಲಿ ನೀರಿನಲ್ಲಿ ಮುಳುಗುತ್ತಿರುವಾಗ ಬಾಹುಬಲಿಯನ್ನು ಕೈಯಲ್ಲಿ ಎತ್ತಿ ಹಿಡಿದಿರುವ ದೃಶ್ಯ ಇಂದಿಗೂ ಎಲ್ಲರ ಮನದಲ್ಲಿ ನೆಲೆಯೂರಿದೆ. ಅಂತಹ ದೃಶ್ಯವನ್ನು ಇದೀಗ ವಿಘ್ನೇಶ್ ಅವರು ರೀ ಕ್ರಿಯೇಟ್ ಮಾಡಿದ್ದಾರೆ. ತಮ್ಮ ಮಕ್ಕಳಿಗೆ ಬಾಹುಬಲಿ ಸಾಂಪ್ರದಾಯಿಕ ಉಡುಗೆಯನ್ನು ತೊಡಿಸಿ, ವಿಘ್ನೇಶ್ ಅವರು ನೀರಿನಲ್ಲಿ ಮುಳುಗಿಕೊಂಡು ತಮ್ಮ ಮಕ್ಕಳನ್ನು ಕೈಯಲ್ಲಿ ಎತ್ತಿ ಹಿಡಿದಿದ್ದಾರೆ.

ಬಾಹುಬಲಿ ದೃಶ್ಯವನ್ನು ಮರುಸೃಷ್ಟಿಸಿದ ಪೋಸ್ಟ್‌ಗೆ ‘ನನ್ನು ಪ್ರೀತಿಯ ಬಾಹುಬಲಿ 1 ಹಾಗೂ 2, ನಿಮ್ಮಿಬ್ಬರಿಂದ ಹ್ಯಾಪಿ ಫಾದರ್ಸ್ ಡೇ. ನಿಮ್ಮಿಬ್ಬರ ಜೊತೆ ಜೀವನ ಬಹಳ ಸೊಗಸಾಗಿದೆ. ತೃಪ್ತಿದಾಯಕವಾಗಿದೆ. ಲವ್ ಯುವ ನನ್ನ ಉಯಿರ್ ಹಾಗೂ ಉಳಗ್’ ಎಂದು ವಿಘ್ನೇಶ್ ಶಿವನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, 2022ರಲ್ಲಿ ನಟಿ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಈ ಜೋಡಿ ಅವಳಿ ಮಕ್ಕಳನ್ನು ಬರಮಾಡಿಕೊಂಡರು.

Share This Article