ಕಾಲಿವುಡ್ (Kollywood) ಲೇಡಿ ಸೂಪರ್ ನಯನತಾರಾ- ವಿಘ್ನೇಶ್ ಶಿವನ್ ದಂಪತಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವಳಿ ಮಕ್ಕಳ (Twins Babies) ಜೊತೆ ನಯನಾತಾರಾ (Nayanatara) ದಂಪತಿ ರಸ್ತೆಗಿಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಕಳೆದ ವರ್ಷ ನಯನತಾರಾ- ವಿಘ್ನೇಶ್ ಶಿವನ್ ಅದ್ದೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಈ ಜೋಡಿ ಪಡೆದಿದ್ದರು. ಕ್ಯಾಮೆರಾ ಕಣ್ಣಿಗೆ ಮಕ್ಕಳ ಮುಖ ತೋರಿಸದೇ ಆಗಾಗ ಮಕ್ಕಳ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ (Vignesh Shivan) ಶೇರ್ ಮಾಡುತ್ತಾರೆ. ಇದನ್ನೂ ಓದಿ: ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್
ನಯನತಾರಾ ದಂಪತಿಯ ಮುದ್ದಾದ ಮಕ್ಕಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬೆನ್ನಲ್ಲೇ ಮಕ್ಕಳನ್ನು ಕರೆದುಕೊಂಡು ಈ ಜೋಡಿ ರಸ್ತೆಗಿಳಿದಿದ್ದಾರೆ. ಆದರೆ ಮಕ್ಕಳ ಮುಖ ತೋರಿಸದೇ ದಂಪತಿಗಳಿಬ್ಬರು ವಿಮಾನ ನಿಲ್ದಾಣದ ಒಳಗೆ ಹೋಗಿದ್ದಾರೆ. ನಯನತಾರಾ ಒಂದು ಮಗುವನ್ನು ಹಾಗೂ ವಿಘ್ನೇಶ್ ಶಿವನ್ ಮತ್ತೊಂದು ಮಗುವನ್ನು ಹಿಡಿದುಕೊಂಡು ಮಕ್ಕಳ ಮುಖವನ್ನು ತೋರಿಸಲೇಬಾರದು ಎಂದು ಪಣತೊಟ್ಟವರಂತೆ ಬಿಗಿಯಾಗಿ ಹಿಡಿದು ಕ್ಯಾಮೆರಾ ಕಣ್ಣಿಗೆ ಕಾಣದಂತೆ ಮರೆಮಾಚಿದ್ದಾರೆ.
View this post on Instagram
ನಯನತಾರಾ ದಂಪತಿಯ ಅವಳಿ ಮಕ್ಕಳನ್ನ ನೋಡಲು ಕಾಯುತ್ತಿದ್ದ ಫ್ಯಾನ್ಸ್ಗೆ ಮತ್ತೊಮ್ಮೆ ನಿರಾಸೆಯಾಗಿದೆ.