ಬೆಳಗಾವಿ: ನವ್ಯಶ್ರೀ ಅವರ ಕಷ್ಟಕ್ಕೆ ಸ್ಪಂದಿಸಿ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಅಂದಿದ್ದೆ. ಆದ್ರೆ ನವ್ಯಶ್ರೀ ಕಳೆದ 4 ವರ್ಷಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು, ಈಗಾಗಲೇ 2 ಲಕ್ಷ ಹಣವನ್ನೂ ಪಡೆದಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಆರೋಪಿಸಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 3-4 ತಿಂಗಳಿನಿಂದ ನವ್ಯಶ್ರೀ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇನೆ. ನನ್ನ ಪತ್ನಿಯ ಸಹಕಾರದಿಂದಲೇ ಕೇಸ್ ದಾಖಲು ಮಾಡಿದ್ದೇನೆ. ನ್ಯಾಯಾಂಗ, ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: 1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP
Advertisement
ನಾನೊಬ್ಬ ಸರ್ಕಾರಿ ನೌಕರನಾಗಿದ್ದು ಹೆಚ್ಚಿಗೆ ಹೇಳಲ್ಲ. ಕಳೆದ 5-6 ತಿಂಗಳಿಂದ ಸತತವಾಗಿ ಬ್ಲ್ಯಾಕ್ಮೇಲ್ ನಡೆಯುತ್ತಿದೆ. ನಾನು ಪತಿ ಎಂದು ನವ್ಯಶ್ರೀ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಕೇವಲ ಹಣಕಾಸಿನ ವ್ಯವಹಾರ ಇದೆ ಎಂದು ಪೊಲೀಸರು ಹೇಳಿದ್ದರು. ಇದಾದ ಬಳಿಕ ಮತ್ತೆ 50 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಈಗಾಗಲೇ 2 ಲಕ್ಷ ಹಣ ಸಹ ಪಡೆದುಕೊಂಡಿದ್ದಾರೆ. ನನ್ನ ಮದುವೆ ವಿಚಾರ ತಿಳಿದು ಬ್ಲ್ಯಾಕ್ ಮೆಲ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
Advertisement
Advertisement
ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದೆ: ನವ್ಯಶ್ರೀ ಆಡಿಯೋ ರಿಲೀಸ್ ವಿಚಾರಕ್ಕೆ ಸಬಂಧಿಸಿದಂತೆ ಮಾತನಾಡಿರುವ ಅವರು, ಆಡಿಯೋದಲ್ಲಿ ಎಲ್ಲಿಯೂ ಪತ್ನಿ ಎಂದು ನಾನು ಹೇಳಿಲ್ಲ. ಮಾನವೀಯ ದೃಷ್ಟಿಯಿಂದ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅವರ ಮನೆ ಸಮಸ್ಯೆ ಬಗ್ಗೆ ಜಗಳ ನಡೆದಿತ್ತು. ಆಗ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಕ್ ಅನುಮತಿ ಪಡೆಯೋದ್ರಲ್ಲಿ ಹಿಂದೂ ದೇಗುಲಗಳ ನಿರಾಸಕ್ತಿ – ಮಸೀದಿ, ಚರ್ಚ್ಗಳೇ ಟಾಪ್
ಮಾತನಾಡುವ ವೇಳೆ ಪತ್ನಿ ಸಹ ನನ್ನ ಜೊತೆಗೆ ಇದ್ರು. ನಮ್ಮ ಸಮಾಜದ ಮಹಿಳೆ ಎಂದು ನಮ್ಮ ಮನೆಗೆ ಬನ್ನಿ ಅಂತಾ ಹೇಳಿದ್ದೇನೆ. ಆಗ ಹೆಂಡತಿ ಯಾರು ಇವರು ಅಂತ ಕೇಳಿದಾಗ ಪತ್ನಿ, ಮಗಳಿಗೆ ಗೊತ್ತಿರಲಿ ಅಂತಾ ಹೇಳಿದ್ದೇನೆ. ನಾನು ಡಿಡಿ ರೂಪದಲ್ಲಿ 2 ಲಕ್ಷ ಹಣ, ಕ್ಯಾಷ್ 3 ಲಕ್ಷ ಕೊಟ್ಟಿದ್ದೇನೆ. ಅವರು ಯಾವುದೇ ದಾಖಲೆ ರಿಲೀಸ್ ಮಾಡಿದ್ರೂ ನನಗೇನೂ ತೊಂದರೆಯಿಲ್ಲ. ಜನರಿಗೆ ಈ ವಿಚಾರ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನ ದೂರು ಸಂದೇಶವಾಗಲಿ: ಪತ್ನಿಯ ಸಹಕಾರದಿಂದಲೇ ದೂರು ನೀಡಿದ್ದೇನೆ. ಯಾರಿಗೂ ಈ ರೀತಿಯ ಬ್ಲ್ಯಾಕ್ಮೇಲ್ ಆಗಬಾರದು. ವೀಡಿಯೋ, ಆಡಿಯೋ ಬಗ್ಗೆ ತನಿಖೆ ಆಗಬೇಕು. ಸತ್ಯಾಸತ್ಯತೆಗಳು ಹೊರಬರಬೇಕು. ತಿಲಕ್ ಕುಮಾರ್ ಮಾವ ಅಂತಾ ಹೇಳಿದ್ರು. ಆಮೇಲೆ ಆಕೆಯ ಫ್ರೆಂಡ್ ಅಂತಾ ಗೊತ್ತಾಗಿದೆ. ಬ್ಲ್ಯಾಕ್ಮೇಲ್ಲ್ಗೆ ಒಳಗಾದವರಿಗೆ ನನ್ನ ದೂರು ಸಂದೇಶವಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]