– ಫೇಸ್‍ಬುಕ್‍ನಲ್ಲಿ ಸಲುಗೆ ಬೆಳೆಸಿ ಬಲೆಗೆ ಬೀಳಿಸ್ತಿದ್ಲು
– ಗೋವಾದಲ್ಲಿ ಯುವತಿಯರನ್ನ ಸೆಕ್ಸ್‌ಗಾಗಿ ಕಳುಹಿಸ್ತಿದ್ದಳು
ಕಾರವಾರ: ಕದಂಬ ನೌಕಾನೆಲೆಯಲ್ಲಿ ಹನಿಟ್ರ್ಯಾಪ್ ಮೂಲಕ ನೌಕಾನೆಲೆಯ ಮಾಹಿತಿ ನೀಡಿದ್ದ ಮೂವರು ಸೇಲರ್ ಗಳೂ ಸೇರಿದಂತೆ 11 ಸೇಲರ್ ಗಳು ಮತ್ತು ಇಬ್ಬರು ಹವಾಲಾ ದಂದೆ ನಡೆಸುತಿದ್ದ ಉದ್ಯಮಿಗಳ ಬಂಧನಕ್ಕೆ ಹೊಸ ತಿರುವು ಸಿಕ್ಕಿದೆ. ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿ ಇಲ್ಲಿಯೇ ಇದ್ದ ಮಹಿಳೆಯನ್ನು ಆಂಧ್ರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ನೌಕಾಪಡೆಯ ಯುವ ಸೇಲರ್ ಗಳು ಹನಿಟ್ರ್ಯಾಪ್ಗೆ ಒಳಗಾಗಿ ಭಾರತದ ವಿಮಾನ ವಾಹಕ ನೌಕೆ ಐಎನ್‍ಎಸ್ ವಿಕ್ರಮಾದಿತ್ಯ ಹಾಗೂ ಸಬ್ ಮೆರಿನ್‍ಗಳ ಗುಪ್ತ ಮಾಹಿತಿಯನ್ನು ವಾಟ್ಸಪ್ ಮೂಲಕ ಪಾಕಿಸ್ತಾನಕ್ಕೆ ರವಾನಿಸಿದ್ದರು. ಪಾಕಿಸ್ತಾನ ಗುಪ್ತಚರ ಏಜನ್ಸಿ ಐಎನ್‍ಎಸ್ ಕೆಲ ಮಹಿಳೆಯರನ್ನು ಒಳಗೊಂಡು ಈ ಕೃತ್ಯಕ್ಕೆ ಕೈ ಹಾಕಿತ್ತು.
ಕದಂಬ ನೌಕಾನೆಲೆ ಸೇರಿದಂತೆ ಉಳಿದ ಸೇಲರ್ ಗಳನ್ನು ಫೇಸ್‍ಬುಕ್ ಮೂಲಕ ತನ್ನ ಮಾಯಾಜಾಲಕ್ಕೆ ಸೆಳೆದ ಮಹಿಳೆಯನ್ನು ಈಗ ಭಾರತದ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದು, ಆಕೆಯನ್ನು ಶೇಖ್ ಶಾಹಿಸ್ತಾ ಎಂದು ಗುರುತಿಸಲಾಗಿದೆ. ಈಕೆ ಪಾಕಿಸ್ತಾನದ ಮಹಿಳೆಯಾಗಿದ್ದು, ಭಾರತದಲ್ಲಿ ಅಕ್ರಮವಾಗಿ ನುಸುಳಿ ಹಲವು ವರ್ಷಗಳಿಂದ ಇಲ್ಲಿಯೇ ನೆಲಸಿ ಈಗ ಆಂಧ್ರದ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಫೇಸ್‍ಬುಕ್‍ನಲ್ಲಿ ಸ್ನೇಹ, ಬ್ಲಾಕ್‍ಮೇಲ್!
ಈ ಮಹಿಳೆ ಫೇಸ್‍ಬುಕ್ ಮೂಲಕ ಸೇಲರ್ ಗಳನ್ನು ಪರಿಚಯಿಸಿಕೊಂಡು ಅವರೊಂದಿಗೆ ಸಲುಗೆ ಬೆಳಸಿದ್ದಾಳೆ. ನಂತರ ಸೇಲರ್ ಗಳು ಈಕೆಯ ಬಲೆಗೆ ಬಿದ್ದ ನಂತರ ಕಾರವಾರ ಹಾಗೂ ಗೋವಾದಲ್ಲಿ ಯುವತಿಯರನ್ನು ಸೆಕ್ಸ್‌ಗಾಗಿ ಇವರ ಬಳಿ ಕಳುಹಿಸಿ ಹನಿಟ್ಯ್ರಾಪ್ ಮಾಡಲಾಗಿದೆ. ಸೆಕ್ಸ್ ವಿಡಿಯೋ ಬಳಸಿ ಬ್ಲಾಕ್‍ಮೇಲ್ ಮಾಡಲಾಗಿತ್ತು. ಇದರಿಂದ ಹೆದರಿದ್ದ ಸೇಲರ್ ಗಳು ಬಲವಂತವಾಗಿ ನೌಕಾಪಡೆಯ ಸಬ್ ಮೆರಿನ್ ಹಡಗುಗಳ ಲಂಗುರು ಹಾಕಿರುವ ಸ್ಥಳಗಳ ಹಾಗೂ ಹಡಗಿನಲ್ಲಿ ನಡೆಯುವ ಎಲ್ಲಾ ಚಟುವಟಿಕೆಯ ಮಾಹಿತಿಯನ್ನು ಚಿತ್ರಗಳನ್ನು ಸಂಗ್ರಹಿಸಿ ಈಕೆಗೆ ವಾಟ್ಸಪ್ ಮಾಡುತಿದ್ದರು.
ಈಕೆ ಅದನ್ನು ಪಾಕಿಸ್ತಾನದ ಏಜನ್ಸಿಗೆ ರವಾನೆ ಮಾಡುತಿದ್ದಳು. ಈ ಕೆಲಸಕ್ಕೆ ಬದಲಾಗಿ ಸೇಲರ್ ಗಳಿಗೆ ಹವಾಲಾ ದಂದೆ ಮಾಡುವ ಉದ್ಯಮಿಗಳ ಮೂಲಕ ಕಾಲಕಾಲಕ್ಕೆ ಹಣ ಜಮಾ ಮಾಡುತ್ತಿದ್ದರು. ಆಂಧ್ರ ಪ್ರದೇಶದ ಪೊಲೀಸರು ಹವಾಲಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಾಗ ಈ ಗೂಡಚಾರಿಕಾ ಪ್ರಕರಣ ಹೊರಬಂದು ಆಪರೇಷನ್ ಡಾಲ್ಪಿನ್ ನೋಸ್ ಎಂಬ ಕಾರ್ಯಾಚರಣೆಯಲ್ಲಿ ಈ ಹನ್ನೊಂದು ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು. ಈಗ ಪಾಜಿಸ್ತಾನದ ಮಹಿಳೆಯನ್ನು ಬಂಧಿಸಿದ್ದು, ಆಂಧ್ರ ಪೊಲೀಸರು ಕಾರವಾರದ ಕದಂಬ ನೌಕಾನೆಲೆಯಲ್ಲಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.