– 9 ದಿನಗಳ ಕಾಲ ಹೋಳಿಗೆ ತುಪ್ಪ ಸವಿಯಲಿರುವ ಲಕ್ಷಾಂತರ ಜನ
ಚಿಕ್ಕೋಡಿ: ನಾಡಿನಾದ್ಯಂತ ಇಂದಿನಿಂದ ದಸರಾ ಹಬ್ಬದ (Dasara Festival) ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಮೈಸೂರು ದಸರಾ (Mysuru Dasara) ಕಣ್ಣು ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನರು ಆಗಮಿಸಿದರೆ ಉತ್ತರ ಕರ್ನಾಟಕದ ಸುಪ್ರಸಿದ್ಧ ಮಠದಲ್ಲಿ ನಡೆಯಲಿರುವ 9 ದಿನಗಳ ಕಾಲ ದಸರಾದಲ್ಲಿ ಲಕ್ಷಾಂತರ ಜನರು ಹೋಳಿಗೆ ಸವಿಯಲು ಆಗಮಿಸಲಿದ್ದಾರೆ.
Advertisement
ಹುಕ್ಕೇರಿ ಪಟ್ಟಣದಲ್ಲಿರುವ ಹುಕ್ಕೇರಿ ಹಿರೇಮಠದ ದಸರಾ(Hukkeri Hiremath Dasara) ಹಬ್ಬ ಸಂಭ್ರಮದಿಂದ ಜರಗುತ್ತದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ದಸರಾ ಹಬ್ಬವನ್ನು ಪ್ರತಿ ವರ್ಷ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ.
Advertisement
Advertisement
ಈ ಬಾರಿಯ ದಸರಾ ಹಬ್ಬವನ್ನು ಹುಕ್ಕೇರಿ ಹಿರೇಮಠದಿಂದ ಹೋಳಿಗೆ ದಸರಾ ಎಂದು ಆಚರಣೆ ಮಾಡಲಾಗುತ್ತಿದ್ದು ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಜನರಿಗೆ 9 ದಿನಗಳ ಕಾಲ ಹೋಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 9 ದಿನಗಳ ಕಾಲ ಲಕ್ಷಾಂತರ ಜನರು ಆಗಮಿಸಿ ಹೋಳಿಗೆ ತುಪ್ಪದ ಊಟದ ಸವಿಯನ್ನು ಸವಿಯಲಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್
Advertisement
ಹೋಳಿಗೆ ದಸರಾದ ಜೊತೆಗೆ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಹಿರೇಮಠದಿಂದ ಶುದ್ಧ ಗಾಳಿ, ಶುದ್ಧ ಆಹಾರ, ಶುದ್ಧ ನೀರು ಎನ್ನುವ ವಿಚಾರದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಜನರಿಗೆ ಉತ್ತಮ ಆರೋಗ್ಯ ಕಾಪಾಡುವ ಜಾಗೃತಿಯನ್ನು ದಸರಾ ಹಬ್ಬದಲ್ಲಿ ಜನರಲ್ಲಿ ಮೂಡಿಸಲಾಗುತ್ತಿದೆ.
ತಾಮ್ರದ ಪಾತ್ರೆಗಳಲ್ಲಿ ನೀರು ಕುಡಿದರೆ ಆಗುವ ಲಾಭಗಳನ್ನು ದಸರಾ ಉತ್ಸವದಲ್ಲಿ ತಾಮ್ರದ ಪಾತ್ರೆಗಳನ್ನು ಇಟ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ 9 ದಿನಗಳ ಕಾಲ ಪ್ರವಚನ, ದೇವಿ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.