ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು. ಈ ಅವಧಿಯಲ್ಲಿ ತಾಯಿ ದೇವಿ, ಶಕ್ತಿ ಅಥವಾ ದೇವಿಯ 9 ರೂಪಗಳನ್ನು ಭಾರತದಾದ್ಯಂತ ಪೂಜಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ನವರಾತ್ರಿಯ ಸಮಯದಲ್ಲಿ ಅನೇಕ ಜನರು ಉಪವಾಸ ಮಾಡುತ್ತಾರೆ. ನಿಮ್ಮ ಆಧ್ಯಾತ್ಮಿಕ ಅಭ್ಯಾಸದಲ್ಲಿ ಪ್ರಗತಿ ಸಾಧಿಸಲು, ಮಾತೃ ದೇವತೆಯ ಶಕ್ತಿಯನ್ನು ಆವಾಹಿಸಲು ಅಥವಾ ನಿಮ್ಮ ದೇಹ, ಮನಸ್ಸನ್ನು ಶುದ್ಧೀಕರಿಸಲು ಇದು ಉತ್ತಮ ಸಮಯವಾಗಿದೆ.
ನವರಾತ್ರಿ ಉಪವಾಸದ ನಿಯಮಗಳು ಸಮುದಾಯದಿಂದ ಸಮುದಾಯಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ಬದಲಾಗುತ್ತವೆ. ಇದೇ ರೀತಿಯ ಉಪವಾಸ ನಿಯಮಗಳು ಏಕಾದಶಿ, ಜನ್ಮಾಷ್ಟಮಿ ಮತ್ತು ಮಹಾಶಿವರಾತ್ರಿ ಸಮಯದ ಉಪವಾಸಕ್ಕೂ ಅನ್ವಯಿಸುತ್ತವೆ.
Advertisement
ನವರಾತ್ರಿ ವೃತದಲ್ಲಿ ಈ ಆಹಾರ ಸೇವಿಸಿ:
ಹಸಿರು ತರಕಾರಿಗಳು, ಸಬ್ಬಕ್ಕಿ, ಒಣ ಹಣ್ಣುಗಳು, ಗೋಧಿ ಹಿಟ್ಟು ಹೀಗೆ ಹಲವು ಪದಾರ್ಥಗಳನ್ನು ಬಳಸಿ ಮಾಡಿದ ಆಹಾರಗಳನ್ನು ಸೇವಿಸಬಹುದು. ಜೀರಿಗೆ, ಕರಿಮೆಣಸಿನ ಪುಡಿ, ಕಲ್ಲುಪ್ಪು, ಏಲಕ್ಕಿ, ಒಣ ದಾಳಿಂಬೆ ಬೀಜ, ಶುಂಠಿ, ಹಸಿರು ಮೆಣಸಿನಕಾಯಿ, ನಿಂಬೆ, ಅ ನ್, ಕೊತ್ತಂಬರಿ, ಪುದೀನಾ, ಕರಿಬೇವಿನ ಸೊಪ್ಪು, ಒಣ ಮಾವಿನಪುಡಿ, ಕಪ್ಪು ಉಪ್ಪು ಹೀಗೆ ಕೆಲ ಮಸಾಲೆ ಪದಾರ್ಥಗಳು ಹಾಗೂ ಗಿಡಮೂಲಿಕೆಗಳನ್ನು ವೃತದ ಸಮಯದ ಆಹಾರದಲ್ಲಿ ಸೇವಿಸಬಹುದು.
Advertisement
ಆಲೂಗಡ್ಡೆ, ಕುಂಬಳಕಾಯಿ, ಸಿಹಿ ಗೆಣಸು, ಬಾಳೆ ಹಣ್ಣು, ಪಪ್ಪಾಯಿ, ಟೊಮೆಟೋ, ಪಾಲಕ್, ಸೊರೇಕಾಯಿ, ಸೌತೆಕಾಯಿ, ಕ್ಯಾರೆಟ್ ನವರಾತ್ರಿಯ ಸಮಯದಲ್ಲಿ ಸೇವಿಸಬಹುದಾದ ಉತ್ತಮ ತರಕಾರಿಗಳು. ಹಾಲಿನಿಂದ ತಯಾರಿಸಿದ ಆಹಾರಗಳು, ಸಕ್ಕರೆ, ಜೇನುತುಪ್ಪ, ಬೆಲ್ಲ, ಹುಣಸೆಹಣ್ಣು, ಕೋಕಮ್, ತೆಂಗಿನಕಾಯಿ, ಕಲ್ಲಂಗಡಿ ಬೀಜ, ಚಹಾವನ್ನು ವೃತದ ವೇಳೆ ಸೇವಿಸಬಹುದು.
Advertisement
ವೃತದ ವೇಳೆ ಈ ಆಹಾರ ಬೇಡ:
ನವರಾತ್ರಿಯ ಸಮಯದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಿ. ಬೇಳೆ ಕಾಳು ಹಾಗೂ ದ್ವಿದಳ ಧಾನ್ಯಗಳನ್ನು ಬಳಸುವಂತಿಲ್ಲ. ಸಾಮಾನ್ಯ ಉಪ್ಪು, ಅರಿಶಿನ, ಹಿಂಗ್, ಸಾಸಿವೆ, ಮೆಂತ್ಯ ಬೀಜ, ಗರಂ ಮಸಾಲೆ ಹಾಗೂ ಕೊತ್ತಂಬರಿ ಪುಡಿಯಂತಹ ಪದಾರ್ಥಗಳನ್ನು ಅನುಮತಿಸಲಾಗುವುದಿಲ್ಲ. ಈ ಪವಿತ್ರ ದಿನಗಳಲ್ಲಿ ಮದ್ಯ, ಮಾಂಸಾಹಾರ, ಮೊಟ್ಟೆ, ಧೂಮಪಾನ ನಿಷೇಧ.
Advertisement
ಉಪವಾಸ:
ನವರಾತ್ರಿಯ ಸಮಯದಲ್ಲಿ ಅನೇಕ ಭಕ್ತರು ಎಲ್ಲಾ 9 ದಿನಗಳಲ್ಲಿ ಉಪವಾಸ ಮಾಡುತ್ತಾರೆ. ಆದರೆ ಅಷ್ಟೂ ದಿನ ಉಪವಾಸ ಮಾಡುವುದು ಪ್ರತಿಯೊಬ್ಬರಿಂದ ಸಾಧ್ಯವಿಲ್ಲ. ಇದರ ಬದಲು ಪ್ರತಿ ದಿನ ನಿಮ್ಮ ಕುಟುಂಬದ ಒಬ್ಬ ವ್ಯಕ್ತಿ ಮನೆಯಲ್ಲಿ ಉಪವಾಸ ಇರಲು ಪ್ರಯತ್ನಿಸಬಹುದು.
ಕೆಲವರು ನವರಾತ್ರಿಯ ಮೊದಲ 2 ದಿನ ಹಾಗೂ ಕೊನೆಯ 2 ದಿನ ಉಪವಾಸ ಮಾಡುತ್ತಾರೆ. ಮೊದಲ 2 ದಿನಗಳಲ್ಲಿ ಉಪವಾಸ ಮಾಡಿದ ನಂತರ ಮತ್ತೆ ಆಹಾರ ಸೇವಿಸಿ ನಂತರ ಕೊನೆಯ 2 ದಿನ ಉಪವಾಸ ಮಾಡುತ್ತಾರೆ. ಕೆಲವರ ಪ್ರಕಾರ ನವರಾತ್ರಿಯ ಮೊದಲ ಹಾಗೂ ಕೊನೆಯ 2 ದಿನ ಉಪವಾಸ ಮಾಡುವುದಕ್ಕಿಂತಲೂ ಕೊನೆಯ 2 ದಿನ ಉಪವಾಸ ಮಾಡುವುದು ಉತ್ತಮ ಎಂಬ ನಂಬಿಕೆಯಿದೆ.
ನವರಾತ್ರಿಯಂದು ಉಪವಾಸ ಹಿಡಿಯಲು ಯಾವುದೇ ಸ್ಥಿರ ನಿಯಮವಿಲ್ಲ. ಏಕೆಂದರೆ ಹಬ್ಬದ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ನಿಮ್ಮ ದೇಹ, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು, ಆಲೋಚನೆಯನ್ನು ಸದಾ ದೇವಿಯ ಮೇಲೆ ಕೇಂದ್ರೀಕರಿಸಿಕೊಳ್ಳುವ ಮೂಲಕವೂ ದೇವಿಯನ್ನು ಒಲಿಸಿಕೊಳ್ಳಬಹುದು.
Web Stories