ಚಂಡೀಗಢ: ಪಂಜಾಬ್ ಮಾಫಿಯಾ ರಾಜ್ಯವಾಗಿದ್ದರಿಂದ ಕಾಂಗ್ರೆಸ್ ಸೋತಿದೆ. ಅದು ಈಗ ತನ್ನನ್ನು ತಾನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಇದರಿಂದಾಗಿ ಮಾಫಿಯಾ ವಿರುದ್ಧ ಆಪ್ ಪಕ್ಷ ಹೋರಾಡಾವುದಾದರೆ ಬೆಂಬಲಿಸುವುದಾಗಿ ಹೇಳಿದರು.
Advertisement
Advertisement
ಈ ಮೊದಲು ನಾನು ಮಾತನಾಡಲಿಲ್ಲ. ಆದರೆ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಐದು ವರ್ಷಗಳ ಮಾಫಿಯಾ ರಾಜ್‍ನ ಆಡಳಿತದಿಂದಾಗಿ ಕಾಂಗ್ರೆಸ್ ಸೋತಿದೆ ಎಂದ ಅವರು, ಮಾಫಿಯಾ ವಿರುದ್ಧ ಸದಾ ಹೋರಾಟ ನಡೆಸಿದ್ದೇನೆ. ನನ್ನ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ, ಇದು ವ್ಯವಸ್ಥೆಯ ವಿರುದ್ಧವಾಗಿದೆ. ಗೆದ್ದಲುಗಳಂತೆ ರಾಜ್ಯವನ್ನು ತಿನ್ನುತ್ತಿರುವ ಕೆಲವು ವ್ಯಕ್ತಿಗಳ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಕೆ.ಜಿ ಬೋಪಯ್ಯ
Advertisement
Advertisement
ಈ ಹೋರಾಟ ಪಂಜಾಬ್‍ನ ಅಸ್ತಿತ್ವಕ್ಕಾಗಿಯೇ ಹೊರತು ಯಾವುದೇ ಹುದ್ದೆಗಾಗಿ ಅಲ್ಲ. ರಾಜಕೀಯವು ವ್ಯಾಪಾರವಾಗಿ ಉಳಿಯುವವರೆಗೂ ಅದನ್ನು ಗೌರವಿಸಲಾಗುವುದಿಲ್ಲ. ಪಂಜಾಬ್ ಮಾಫಿಯಾ ಮುಕ್ತವಾದಾಗ ರಾಜ್ಯವು ಉದಯಿಸುತ್ತದೆ. ಮಾಫಿಯಾ ವಿರುದ್ಧದ ಹೋರಾಟದಲ್ಲಿ ಬೆಂಬಲಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ನಾಳೆಯಿಂದ ಹಿಜಬ್ ನಾಟಕ ಮಾಡಿದ್ರೆ ಕ್ರಿಮಿನಲ್ ಕೇಸ್: ರಘುಪತಿ ಭಟ್ ಎಚ್ಚರಿಕೆ