ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಹೋಗಬೇಕೆಂದರೆ ವಿಜಯದಶಮಿಯ ಸಂದರ್ಭದಲ್ಲಿ ಹೋಗಬೇಕು. ಏಕೆಂದರೆ ಈ ಸಮಯದಲ್ಲಿ ಕೋಲ್ಕತ್ತಾದ ಸುತ್ತ ಜೀವಂತಿಕೆಯ ಸಂಭ್ರಮ ಕಳೆಗಟ್ಟಿರುತ್ತದೆ. ಸಂಪೂರ್ಣ ಜನಸ್ತೋಮ ಕೇವಲ ಜಗಜ್ಜಜನಿಯ ಪೂಜೆಯ ಸಂಭ್ರಮದಲ್ಲಿರುತ್ತದೆ. ಅದುವೇ ದುರ್ಗಾ ಪೂಜೆ, ಭವತಾರಿಣಿಗೆ ಅವರು ಅರ್ಪಿಸುವ ವಂದನೆ.
ಹೌದು. ದೇಶದಲ್ಲಿ ಎಲ್ಲಕ್ಕಿಂತ ಸಂಭ್ರಮದ ದಸರೆ ಉತ್ಸವ ನಡೆಯುವುದು ಕೋಲ್ಕತ್ತಾದಲ್ಲಿ. ದುರ್ಗಾಪೂಜೆಗೆ 4 ತಿಂಗಳ ಹಿಂದೆಯೇ ತಯಾರಿ ಆರಂಭವಾಗಿರುತ್ತದೆ. ಕುಮಾರ್ತುಲಿಯಿಂದ ಆರಂಭಿಸಿ ಡಮ್ ಡಮ್ ಪಾರ್ಕ್ ತನಕ ದಸರೆಯ ವೇಳೆ ಕೊಲ್ಕೊತ್ತಾದ ಬೀದಿಬೀದಿಗಳಲ್ಲಿ ಸರ್ಬೋಜನಿನ್ (ಸಾರ್ವಜನಿಕ) ದುರ್ಗಾಪೂಜೆಯ ಪೆಂಡಾಲ್‌ಗಳು ತಲೆಯೆತ್ತುತ್ತವೆ. ಒಂದನ್ನೊಂದು ಮೀರಿಸುವ ವೈಭವ, ಜಾನಪದ ನೃತ್ಯಸಂಗೀತ, ಸಾಂಪ್ರದಾಯಿಕ ಆಚರಣೆಗಳಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನಗಳ ತನಕ ಎಲ್ಲವನ್ನೂ ಸೇರಿಸಿಕೊಂಡು ವಿಜೃಂಭಿಸುವ ಮಹೋತ್ಸವ ಇದಾಗಿರುತ್ತದೆ.
Advertisement
Advertisement
ದೇವಿಯ ಭವ್ಯ ಅಲಂಕಾರ, ನಿತ್ಯ ಪೂಜೆಯ ಸಂಭ್ರಮ, ಮಾತ್ರವೇ ಅಲ್ಲ, ಪೆಂಡಾಲ್‌ಗಳಲ್ಲಿ ನಡೆಯುವ ವಿಭಿನ್ನ ಸ್ಪರ್ಧೆಗಳು, ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ. ಇಲ್ಲಿ ನೃತ್ಯ ಸಂಗೀತಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಗೊಂಬೆಗಳ ಪ್ರದರ್ಶನವಿರುತ್ತದೆ. ಚಿತ್ರಕಲಾ ಸ್ಪರ್ಧೆಗಳೊಂದಿಗೆ ವಿನೂತನ ಪ್ರಯೋಗಗಳು ನಡೆಯುತ್ತವೆ. ಹೀಗೆ ದುರ್ಗಾ ಪೂಜೆ ಸಮಯದಲ್ಲಿ ಕೋಲ್ಕತ್ತಾದ ಸುತ್ತ 3 ಸಾವಿರಕ್ಕೂ ಅಧಿಕ ಪೆಂಡಾಲ್‌ಗಳಲ್ಲಿ ದುರ್ಗಾಪೂಜೆಯ ಸಂಭ್ರಮ ನಡೆಯುತ್ತದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧ ಪೆಂಡಾಲ್‌ಗಳ ಬಗ್ಗೆ ತಿಳಿಯಬಹುದು.
Advertisement
ಕುರ್ಮಾತುಲಿ ಪಾರ್ಕ್ ದುರ್ಗಾ ಪೆಂಡಾಲ್:
ಕೋಲ್ಕತ್ತಾದಲ್ಲಿ ಎಲ್ಲಕ್ಕಿಂತ ಪ್ರಸಿದ್ಧವಾಗಿರುವುದು ಕುರ್ಮಾತುಲಿ ಪಾರ್ಕ್‌ನ ದುರ್ಗಾ ಪೆಂಡಾಲ್. ಕುರ್ಮಾತುಲಿ ಪ್ರಸಿದ್ಧವಾಗಿರುವುದು ವಿಗ್ರಹಗಳ ನಿರ್ಮಾಣಕ್ಕೆ. ಇಲ್ಲಿ ತಯಾರಾಗುವ ದೇವಿ-ದೇವತೆಗಳ ವಿಗ್ರಹಗಳು ಕೋಲ್ಕತ್ತಾದಲ್ಲಿ ಮಾತ್ರವೇ ಅಲ್ಲ, ವಿದೇಶಗಳಲ್ಲೂ ಜನಪ್ರಿಯವಾಗಿವೆ.
Advertisement
ಕುಮಾರ್ತುಲಿ ಪಾರ್ಕ್‌ನ ದುರ್ಗಾ ಪೆಂಡಾಲ್ ಎಲ್ಲಕ್ಕಿಂತ ಭಿನ್ನ ದುರ್ಗೆಯ ನವನವೀನ ರೂಪಗಳ ದರ್ಶನ ಸಾಧ್ಯವಾಗುತ್ತದೆ ಇಲ್ಲಿ. ಬಂಗಾಳದ ದುರ್ಗಾ ಪೂಜೆ ಹಲವು ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯ. ಆದರೆ ಜನರಿಗೆ ವೈವಿಧ್ಯ ಕೂಡಬೇಕು. ಕಾಲಕಾಲಕ್ಕೆ ಬದಲಾವಣೆ ಆದರೆ ಮಾತ್ರ ಈ ಸಂಪ್ರದಾಯ ಯುವ ಜನಾಂಗವನ್ನು ಆಕರ್ಷಿಸಲು ಸಾಧ್ಯ. ಈ ಕಾರಣಕ್ಕಾಗಿ ಕುಮಾರ್ತುಲಿ ಪಾರ್ಕ್‌ನ ದುರ್ಗಾ ಪೂಜೆ ಪೆಂಡಾಲ್ ದುರ್ಗೆಯ ರೂಪಕವನ್ನು ಚಿರನೂತನವಾಗಿ ಮಾಡಲು ಹಲವು ಪ್ರಯೋಗಗಳನ್ನು ನಡೆಸುತ್ತಲೇ ಇರುತ್ತದೆ. ದುರ್ಗಾ ಉತ್ಸವದಲ್ಲಿ ಹೊಸ ಟ್ರೆಂಡ್‌ಗಳನ್ನ ನೋಡಬಯಸುವ ಭಕ್ತರಿಗೆ ಆಕರ್ಷಣೆಯಾಗುವಂತೆ ಪೆಡಾಲ್‌ಗಳನ್ನು ನಿರ್ಮಿಸಲಾಗಿರುತ್ತದೆ.
ಕುಮಾರ್ತುಲಿ ಪಾರ್ಕ್ ಸರ್ಬೋಜನಿನ್ ದುರ್ಗಾ ಪೂಜಾ ಪೆಂಡಾಲ್ ಸಮಿತಿ ಆರಂಭವಾಗಿದ್ದು ಸುಮಾರು 30 ವರ್ಷಗಳ ಹಿಂದೆ. ಪ್ರತಿ ಬಾರಿಯೂ ಈ ಪೆಂಡಾಲ್‌ನ ಥೀಮ್ ಬದಲಾಗುತ್ತದೆ. ಪ್ರತಿವರ್ಷವೂ ಇಲ್ಲಿ ನವನವೀನ ಕಲ್ಪನೆಗಳು ಮೂರ್ತರೂಪ ತಳೆಯುತ್ತವೆ.
ಕುಮಾರ್ತುಲಿ ಪಾರ್ಕ್ ಪೆಂಡಾಲ್ ಇರುವುದು ಸೋವಾಬಜಾರ್ ಲಾಂಚ್ ಘಾಟ್‌ನ ಸಮೀಪದಲ್ಲಿ, ನದಿ ತೀರದ ಬಳಿಯಿದೆ. ಸೋವಾಬಜಾರ್ ಸ್ಟೇಶನ್ ಮೆಟ್ರೋ ನಿಲ್ದಾಣದಿಂದ ಇಲ್ಲಿಗೆ ಹತ್ತಿರವಾಗಿದೆ.