ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಸರಾ, ಹಾಯ್ ನಾನಾ, ಸರಿಪೋಧಾ ಸನಿವಾರಮ್ ಸಿನಿಮಾಗಳ ಸಕ್ಸಸ್ ಕಂಡ ನಾನಿ ಇದೀಗ ‘ಹಿಟ್ 3’ ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ
Advertisement
‘ಹಿಟ್: ದಿ ಥರ್ಡ್ ಕೇಸ್’ (Hit 3) ಸಿನಿಮಾವನ್ನು ಕೈಗೆತ್ತಿಕೊಂಡಿರುವ ಬಗ್ಗೆ ಅಧಿಕೃತವಾಗಿ ನಟ ತಿಳಿಸಿದ್ದಾರೆ. ಸಸ್ಪೆನ್ಸ್ ಜೊತೆ ಥ್ರಿಲ್ ಆಗೋವಂತಹ ಕಥೆ ಹೇಳೋಕೆ ನಾನಿ ಹೊರಟಿದ್ದಾರೆ. ಇನ್ನೂ ನಾನಿ ಕುದುರೆಯ ಪಕ್ಕದಲ್ಲಿ ಕುಳಿತು ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ಸದ್ಯ ಈ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ನಾನಿಗೆ ನಾಯಕಿಯಾಗಿ ‘ಕೆಜಿಎಫ್’ ಚೆಲುವೆ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ‘ಹಿಟ್ ಪಾರ್ಟ್ 3’ ಮುಂದಿನ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ. ಹಿಟ್ ಪಾರ್ಟ್ 1 & 2 ಸಿನಿಮಾ ಸಕ್ಸಸ್ ಕಂಡಿದೆ. ‘ಹಿಟ್ 3’ ಮೇಲೆ ಭಾರೀ ನಿರೀಕ್ಷೆಯಿದೆ. ನಾನಿ ಮತ್ತು ಕನ್ನಡತಿ ಶ್ರೀನಿಧಿ ಶೆಟ್ಟಿ (Srinidhi Shetty) ಈ ಸಿನಿಮಾ ಮೂಲಕ ಗೆಲ್ತಾರಾ? ಎಂದು ಕಾಯಬೇಕಿದೆ.