ರಾಕಿಂಗ್ ಸ್ಟಾರ್ ಯಶ್ `ಕೆಜಿಎಫ್ 2′ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಕೆಜಿಎಫ್ 1 ಮತ್ತು ಚಾಪ್ಟರ್ 2 ಮೂಲಕ ರಾಷ್ಟಾçದ್ಯಂತ ಸದ್ದು ಮಾಡುತ್ತಿದ್ದಾರೆ. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲ ನಾನಾ ಸಿನಿಮಾ ರಂಗದ ಸ್ಟಾರ್ ನಟರ ಜೊತೆಯೂ ರಾಕಿಭಾಯ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.
Advertisement
ನಟ ಯಶ್ ಅವರಿಗೆ ಟಾಲಿವುಡ್‌ನಲ್ಲೂ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರಿದ್ದಾರೆ. ರಾಮ್‌ಚರಣ್, ಜ್ಯೂ.ಎನ್‌ಟಿಆರ್, ಅಲ್ಲು ಅರ್ಜುನ್ ಜೊತೆ ಅವರಿಗೆ ಒಳ್ಳೆಯ ಗೆಳೆತನವಿದೆ. ಹಾಗಾಗಿ ನಟ ಯಶ್ ಮೊನ್ನೆಯಷ್ಟೇ ಜ್ಯೂ.ಎನ್‌ಟಿಆರ್ ತಾಯಿ ಜೊತೆಗಿರುವ ವಿಶೇಷ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ಇಂದು ಕೊನೆಗೂ ಮದುವೆಯಾದ ರಣಬೀರ್ ಮತ್ತು ಆಲಿಯಾ ಭಟ್
Advertisement
Advertisement
ಸಿನಿಮಾ ಪ್ರಮೋಷನ್‌ಗಾಗಿ ಯಶ್ ಹೈದರಾಬಾದ್‌ಗೆ ಹೋದಾಗ ನಟ ರಾಮ್‌ಚರಣ್ ಮನೆಯಿಂದ ಅಡುಗೆ ಕಳುಹಿಸಿ ಕೊಟ್ಟಿದ್ದರಂತೆ. ಅಷ್ಟೇ ಅಲ್ಲದೇ ಜ್ಯೂ.ಎನ್‌ಟಿಆರ್ ಮನೆಗೆ ಯಶ್ ಭೇಟಿ ಕೊಟ್ಟಿದ್ದರಂತೆ. ಆ ವೇಳೆಯಲ್ಲಿ ಜ್ಯೂ.ಎನ್‌ಟಿಆರ್ ತಾಯಿಯ ಅತಿಥಿ ಸತ್ಕಾರ ಕಂಡು ರಾಕಿಭಾಯ್ ಖುಷಿಪಟ್ಟಿದ್ದಾರೆ. ಜ್ಯೂ.ಎನ್‌ಟಿಆರ್ ತಾಯಿ ಶಾಲಿನಿ ಅವರು ಕನ್ನಡದವರೇ ಆಗಿರುವುದರಿಂದ ಅವರೊಂದಿಗೆ ಬೆರೆಯಲು ಸುಲಭವಾಯಿತು. ಅದರಿಂದಲೇ ಜ್ಯೂ.ಎನ್‌ಟಿಆರ್ ಕುಟುಂಬದ ಜೊತೆ ಒಳ್ಳೆಯ ಒಡನಾಟ ಬೆಳೆಯಿತು. ಜ್ಯೂ.ಎನ್‌ಟಿಆರ್ ಅವರಿಗೆ ಕನ್ನಡದ ಮೇಲೆ ಅಪಾರ ಅಭಿಮಾನಿವಿದೆ ಎಂದು ಯಶ್ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಹೀಗೇ ರಾಮ್‌ಚರಣ್, ಜ್ಯೂ.ಎನ್‌ಟಿಆರ್ ಜೊತೆಯಿರುವ ಫ್ರೇಂಡ್‌ಶಿಪ್ ಬಗ್ಗೆ ರಿವೀಲ್ ಮಾಡಿದ್ದಾರೆ.