ಚಂದನವನದ `ಮಫ್ತಿ’ ನಿರ್ದೇಶಕ ನರ್ತನ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂತಸದ ನಡುವೆ ನರ್ತನ್ ಮತ್ತು ಯಶ್ ಕಾಂಬಿನೇಷನ್ ಸಿನಿಮಾ ಕೂಡ ಸಖತ್ ಸದ್ದು ಮಾಡ್ತಿದೆ. `ಕೆಜಿಎಫ್ 2′ (Kgf 2) ಸಕ್ಸಸ್ ನಂತರ ಯಶ್ 19 ಸಿನಿಮಾ, ನರ್ತನ್ ಜೊತೆ ಬರಲಿದೆ ಎಂದು ಸಖತ್ ಸುದ್ದಿಯಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ನ್ಯಾಷನಲ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ 19ನೇ (Yash 19) ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಕೆವಿಎನ್ ಪ್ರೊಡಕ್ಷನ್ (KVN) ಹೌಸ್ ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಇದರ ಜೊತೆಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೂಡ ಇದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.
View this post on Instagram
ಸ್ಯಾಂಡಲ್‌ವುಡ್‌ನ (Sandalwood) ಖ್ಯಾತ ನಿರ್ದೇಶಕ ನರ್ತನ್ (Narthan) ಅವರ ಹುಟ್ಟುಹಬ್ಬ. ಇವರ ಜನ್ಮದಿನಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ನರ್ತನ್‌ಗೆ ಕೆವಿನ್ ವಿಶ್ ಮಾಡಿದೆ. ಇದರಲ್ಲಿ ನಮ್ಮ ಡೈರೆಕ್ಟರ್ ಎಂದು ಬರೆದಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಯಶ್ 19 ಬಗ್ಗೆ ಚಿಕ್ಕ ಸುಳಿವು ನೀಡಿರುವ ಕೆವಿಎನ್ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬದ ದಿನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೀಪಿಕಾ ದಾಸ್ ಆಸೆಯಂತೆ ಬಿಗ್ ಬಾಸ್ ಮನೆಗೆ ವಾಸುಕಿ ವೈಭವ್ ಎಂಟ್ರಿ
View this post on Instagram
`ಕೆಜಿಎಫ್ 1′ ಮತ್ತು `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಕೂಡ ತಮ್ಮ ಮುಂದಿನ ಚಿತ್ರ ಆಯ್ಕೆಯಲ್ಲಿ ಸೆಲೆಕ್ಟೀವ್ ಆಗಿದ್ದಾರೆ. ಸಿನಿಮಾ ಬರೋದು ತಡವಾದರೂ ಪರ್ವಾಗಿಲ್ಲ. ಒಳ್ಳೆಯ ಸಿನಿಮಾ ಅಭಿಮಾನಿಗಳಿಗೆ ಕೊಡಬೇಕು ಎಂಬುದು ಯಶ್ ಅವರ ಉದ್ದೇಶವಾಗಿದೆ.