ನ್ಯಾಷನಲ್ ಸ್ಟಾರ್ ಯಶ್ (Yash) ನಟನೆಯ `ಕೆಜಿಎಫ್ 2′ (Kgf 2) ಸಕ್ಸಸ್ ನಂತರ ಮುಂದೇನು ಮಾಡ್ತಾರೆ ಎಂಬುದೇ ಅಭಿಮಾನಿಗಳಿಗೆ ಪ್ರಶ್ನೆಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಮಗಳು ಐರಾ ಹೆಸರಿನಲ್ಲಿ ಯಶ್, ಪ್ರೊಡಕ್ಷನ್ ಹೌಸ್ ಮಾಡುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಸುದ್ದಿ ನಿಜನಾ ಎಂಬುದಕ್ಕೆ ಇದೀಗ ಸ್ಪಷ್ಟನೆ ಸಿಕ್ಕಿದೆ.
`ಕೆಜಿಎಫ್ 2′ ಕೋಟಿ ಕೋಟಿ ಕಲೆಕ್ಷನ್ ಮಾಡಿ, ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಯಶ್ ಮುಂದಿನ ಸಿನಿಮಾಗೆ ಕಾತರದಿಂದ ಕಾಯ್ತಿರುವ ಸಂದರ್ಭದಲ್ಲಿ ಐರಾ ನಿರ್ಮಾಣ ಸಂಸ್ಥೆ (Ayra Production House) ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ಈ ವಿಚಾರಕ್ಕೆ ಉತ್ತರ ಸಿಕ್ಕಿದೆ. ನಿನ್ನೆಯಷ್ಟೇ ಐರಾ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಂದರ್ಭದಲ್ಲೂ ಈ ಕುರಿತು ಯಾವುದೇ ಘೋಷಣೆ ಆಗಿಲ್ಲ. ಇದು ಸುಳ್ಳು ಅನ್ನೋದು ಅಭಿಮಾನಿಗಳಿಗೂ ಖಚಿತವಾಗಿದೆ. ಇದನ್ನೂ ಓದಿ: ಹರಿಪ್ರಿಯಾ- ವಸಿಷ್ಠ ಸಿಂಹ ಎಂಗೇಜ್‌ಮೆಂಟ್ ಫೋಟೋಸ್ ಔಟ್
ನಟ ಯಶ್‌ಗೆ ಐರಾ ಪ್ರೊಡಕ್ಷನ್ ಹೌಸ್ ಮಾಡುವ ಬಗ್ಗೆ ಯಾವುದೇ ಪ್ಲ್ಯಾನ್ ಇಲ್ಲ. ಹೊಸ ಬಗೆಯ ಕಥೆ, ಪಾತ್ರದ ತಯಾರಿಯಲ್ಲಿದ್ದಾರೆ. ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಾಗಿದ್ದು, ಅದರ ತಯಾರಿಯಲ್ಲಿ ಯಶ್ ತಂಡ ಬ್ಯುಸಿಯಾಗಿದ್ದಾರೆ. ಕೊರೊನಾ ನಿಮಿತ್ತ ಯಶ್ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ 2023ಕ್ಕೆ ರಾಕಿ ಭಾಯ್ ಬರ್ತ್‌ಡೇಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಯಶ್ ಟೀಮ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಯಶ್ ಹುಟ್ಟುಹಬ್ಬದಂದು ತಮ್ಮ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.