ನ್ಯಾಷನಲ್ ಸ್ಟಾರ್ ಯಶ್ (Yash) ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿದ ‘ಕೆಜಿಎಫ್ 1’ (KGF Chapter 1) ಚಿತ್ರ ರೀ ರಿಲೀಸ್ ಆಗಿದೆ. ಮತ್ತೊಮ್ಮೆ ರಾಕಿ ಭಾಯ್ ಆಗಿ ಯಶ್ (Yash) ಅಬ್ಬರಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಲ್ಲ, ಬದಲಿದೆ ತೆಲುಗು ರಾಜ್ಯಗಳಲ್ಲಿ ಸಿನಿಮಾ ತೆರೆ ಕಂಡಿದೆ. ಇದನ್ನೂ ಓದಿ:ರಶ್ಮಿಕಾ ಫ್ಯಾನ್ಸ್‌ಗೆ ಸಿಹಿಸುದ್ದಿ- ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್
- Advertisement -
ಜೂನ್ 21ರಂದು ಯಶ್ ನಟನೆಯ ಬ್ಲಾಕ್ ಬಸ್ಟರ್ ಕೆಜಿಎಫ್ 1 ಸಿನಿಮಾ ಮಗದೊಮ್ಮೆ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ ‘ಕೆಜಿಎಫ್ 1’ ತೆಲುಗು ವರ್ಷನ್ ಎರಡು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇನ್ನೂ ಬೇರೆ ನಗರಗಳಲ್ಲಿಯೂ ಸಿನಿಮಾ ರಿಲೀಸ್ ಆಗಿದೆ.
- Advertisement -
- Advertisement -
‘ಕೆಜಿಎಫ್’ ರೀ ರಿಲೀಸ್‌ಗೂ ತೆಲುಗು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತಮ್ಮದೇ ನೆಲದ ಸ್ಟಾರ್ ನಟನ ಸಿನಿಮಾ ಎಂಬಂತೆಯೇ ಮತ್ತೊಮ್ಮೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಉತ್ತಮ ಗಳಿಕೆ ಕಾಣ್ತಿದೆ.
- Advertisement -
2018ರಲ್ಲಿ ತೆರೆಕಂಡ ‘ಕೆಜಿಎಫ್’ (KGF) ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ (Srinidhi Shetty) ನಟಿಸಿದ್ದರು. ಯಶ್ ತಾಯಿಯ ಪಾತ್ರದಲ್ಲಿ ಅರ್ಚನಾ ಜೀವತುಂಬಿದ್ದರು. ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು.