ಕೋಲ್ಕತ್ತ: ಬಂಗಾಳದ ಬಾಲಿ ಹಾಸ್ಟೆಲ್ನಲ್ಲಿ ರಾಷ್ಟ್ರ ಮಟ್ಟದ ಶೂಟರ್ ಕೋನಿಕಾ ನಾಯಕ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Advertisement
ಸ್ಥಳಕ್ಕೆ ಹೌರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಮೃತದೇಹದ ಪಕ್ಕದಲ್ಲೇ ಡೆತ್ನೋಟ್ ಕಂಡುಬಂದಿದೆ. ಖಿನ್ನತೆಯೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದು ಬರೆಲಾಗಿದೆ. ಹೀಗಾಗಿ ಶೂಟರ್ ಕೋನಿಕಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ
Advertisement
ನನಗೆ ಅವಕಾಶಗಳು ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದೆ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಶೂಟರ್ ಕೋನಿಕಾ ರಾಜ್ಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ. ಜಾರ್ಖಂಡ್ ರಾಜ್ಯಮಟ್ಟದ ರೈಫಲ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದಿದ್ದರು. ಅಲ್ಲದೇ ಒಲಿಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಜೋಯ್ದೀಪ್ ಕರ್ಮಾಕರ್ ಬಳಿ ತರಬೇತಿ ಪಡೆಯುತ್ತಿದ್ದರು.
Advertisement
ಈಚೆಗಷ್ಟೇ ಬಾಲಿವುಡ್ ನಟ ಸೋನು ಸೂದ್ ಅವರಿಂದ ಜರ್ಮನಿಯಲ್ಲಿ ತಯಾರಿಸಿದ್ದ ರೈಫಲ್ ಅನ್ನು ಈಕೆಗೆ ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: ಕುಟುಂಬದವರೊಂದಿಗೆ ಶೌರ್ಯ ಚಕ್ರ ಪ್ರಶಸ್ತಿ ಸಂಭ್ರಮಾಚರಿಸಿಕೊಳ್ಳಲು ಬಯಸಿದ್ರು ವರುಣ್ ಸಿಂಗ್!
ʼಸೋನು ಸೂದ್ ಸರ್, ನನ್ನ ರೈಫಲ್ ಇಲ್ಲಿದೆ. ನನ್ನ ಕುಟುಂಬದಲ್ಲಿ ಸಂತಸ ಮೂಡಿದೆ. ಇಡೀ ಗ್ರಾಮವೇ ನಿಮ್ಮನ್ನು ಆಶೀರ್ವದಿಸುತ್ತಿದೆ. ನೀವು ಬಹುಕಾಲ ಬಾಳಿರಿʼಎಂದು ರೈಫಲ್ ಪಡೆದ ನಂತರ ಕೋನಿಕಾ ಟ್ವೀಟ್ ಮಾಡಿ ಸೋನು ಸೂದ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದರು.