ಮಡಿಕೇರಿ: ರಾಷ್ಟ್ರೀಯ ಭಾಷೆಯನ್ನು ಯಾರಿಗೆ ಯಾರೂ ಹೇರಿಕೆ ಮಾಡಲು ಸಾಧ್ಯವಿಲ್ಲ. ತಮ್ಮ ತಮ್ಮ ಭಾಷೆಗಳನ್ನು ಮಾತನಾಡುವ ಜೊತೆಯಲ್ಲಿ ರಾಷ್ಟ್ರೀಯ ಭಾಷೆ ಹಿಂದಿ ಹಾಗೂ ಜಗತ್ತಿನ ಭಾಷೆ ಇಂಗ್ಲಿಷ್ ಅನ್ನು ಕಲಿಯಲೇಬೇಕು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದರು.
ದೇಶದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಹಿಂದಿ ಹೇರಿಕೆ ವಿವಾದವನ್ನು ತಮ್ಮ ಹೇಳಿಕೆ ಮೂಲಕ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತೆ ಹೊರತೆಗೆದಿದ್ದಾರೆ. ಇದೀಗ ಕೇಂದ್ರ ಸರ್ಕಾರ ಎಲ್ಲರ ಮೇಲೂ ಬಲವಂತವಾಗಿ ಹಿಂದಿ ಹೇರಿಕೆ ಮಾಡಲು ಮುಂದಾಗಿದ್ದು, ದೇಶದ ಜನತೆ ಹಿಂದಿಯಲ್ಲೇ ಮಾತನಾಡಬೇಕು ಎಂದು ಮೌಖಿಕವಾಗಿ ಹುಕುಂ ಹೊರಡಿಸಿದೆ. ಇದನ್ನೂ ಓದಿ: ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಭಾಷೆ ಬಳಕೆಯಾಗಬೇಕು: ಅಮಿತ್ ಶಾ
Advertisement
Advertisement
ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಬೇರೆ ಬೇರೆ ರಾಜ್ಯದ ಜನರು ಪರಸ್ಪರ ಸಂವಹನ ನಡೆಸುವಾಗ ದೇಶದ ಭಾಷೆ ಹಿಂದಿಯಲ್ಲಿ ಮಾತನಾಡಬೇಕೇ ವಿನಃ ಇಂಗ್ಲಿಷ್ ಭಾಷೆಯಲ್ಲಿ ಅಲ್ಲ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪ್ರಗತಿ ನಿಲ್ಲಿಸಲು ಸಾಧ್ಯವಿಲ್ಲ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ಹತಾಶೆ ಕಾಡುತ್ತಿದೆ: ಬೊಮ್ಮಾಯಿ
Advertisement
ಅಮಿತ್ ಶಾ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಉಮೇಶ್ ಕತ್ತಿ, ಬದುಕು ನಡೆಸಲು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿಯಲೇಬೇಕು ಎಂದು ಹೇಳಿಕೆ ನೀಡಿದರು.