ಬಿಜೆಪಿ ಸಂಘಟನಾ ಕಾರ್ಯದರ್ಶಿಯಿಂದ ಅಮಿತ್ ಶಾಗೆ ಮೌಖಿಕ ದೂರು

Public TV
1 Min Read
AMIT SANTHOSH

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮೌಖಿಕ ದೂರು ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಸರ್ಕಾರ ಬೀಳಿಸಲು ವಿಜಯೇಂದ್ರ ನಡೆಸಿದ್ದ `ಆಪರೇಷನ್’ ವಿಫಲವಾಗಿದೆ. ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸಿಲುಕಿಕೊಳ್ಳಲು ವಿಜಯೇಂದ್ರನೇ ಕಾರಣ. ಹೀಗಾಗಿ ವಿಜಯೇಂದ್ರನನ್ನು ಕಂಟ್ರೋಲ್ ಮಾಡದಿದ್ದರೆ ಬಿಜೆಪಿಗೆ ಡ್ಯಾಮೇಜ್ ಆಗೋದು ಪಕ್ಕಾ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Yadiyurappa 01 1

ಯಡಿಯೂರಪ್ಪರ ಇವತ್ತಿನ ಸ್ಥಿತಿಗೆ ಅವರ ಮಗ ವಿಜಯೇಂದ್ರನೇ ಕಾರಣ. ವಿಜಯೇಂದ್ರರನ್ನ ಕಂಟ್ರೋಲ್ ಮಾಡ್ಲಿಲ್ಲ ಅಂದ್ರೆ ಬಿಜೆಪಿಗೆ ಡ್ಯಾಮೇಜ್ ಆಗುತ್ತದೆ. `ಆಪರೇಷನ್ ಕಮಲ’ ಆಡಿಯೋದಲ್ಲಿ ತಗ್ಲಾಕ್ಕಿಕೊಳ್ಳಲು ವಿಜಯೇಂದ್ರ ಎಡವಟ್ಟೇ ಕಾರಣವಾಗಿದೆ ಎಂದು ಶಾ ಜೊತೆ ಸಂತೋಷ್ ಹೇಳಿದ್ದಾರೆ.

ಬಿಎಸ್‍ವೈ ಅವರಿಗೆ ಹೊರಗಿನ ವೈರಿಗಳಿಗಿಂದ ಒಳಗಿನ ವೈರಿಗಳಿಂದಲೇ ಸಾಕಷ್ಟು ತೊಂದರೆಗಳಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತವೆ. ಆಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ಸಂತೋಷ್ ಅವರು ಅಮಿತ್ ಶಾ ಅವರಿಗೆ ದೂರು ನೀಡಿದ್ದು, ಬಿಜೆಪಿ ವಿಫಲ ಯತ್ನಗಳು ವಿಜಯೇಂದ್ರ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆ. ಹೀಗಾಗಿ ಅವರಿಂದಲೇ ಬಿಎಸ್‍ವೈ ಅವರಿಗೂ ತೊಂದರೆಯಾಗುತ್ತಿದೆ. ಪಕ್ಷಕ್ಕೂ ಮುಜುಗರ ಉಂಟಾಗುತ್ತಿದೆ. ಈ ಕಾರಣಕ್ಕಾಗಿ ಅವರನ್ನು ಕಂಟ್ರೋಲ್ ಮಾಡಬೇಕು ಎಂದು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Vijayendra NOTA 3

ಈ ಹಿಂದೆ ವರುಣಾ ಕ್ಷೇತ್ರದ ಟಿಕೆಟ್ ಕೊಡುವ ಸಂದರ್ಭದಲ್ಲಿಯೂ ಇದೇ ರೀತಿ ಅಡೆತಡೆಗಳು ಬಂದಿತ್ತು. ಆ ಸಂದರ್ಭದಲ್ಲಿ ಸಂತೋಷ್ ಅವರು ಟಿಕೆಟ್ ತಪ್ಪಿಸಿದ್ದರು ಎಂದು ಆರೋಪ ಮಾಡಲಾಗಿತ್ತು. ಹೀಗಾಗಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ಸಂಘಟನೆಯ ವೇಳೆ ಯಾವುದೇ ಅಡೆತಡೆಗಳು ಉಂಟಾಗಬಾರದೆಂಬ ನಿಟ್ಟಿನಲ್ಲಿ ನಿಮಗೆ ದೂರು ನೀಡುತ್ತಿದ್ದೇನೆ ಎಂದು ಸಂತೋಷ್ ತಿಳಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *