ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಡಿ ವಿಚಾರಣೆಯಿಂದ ಮೂರು ದಿನ ರಿಲೀಫ್ ನೀಡಿದೆ.
ಗುರುವಾರ ಈ ಸಂಬಂಧ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ತಗುಲಿದ್ದು ಆಸ್ಪತ್ರೆ ದಾಖಲಾಗಿದ್ದಾರೆ ಮತ್ತು ಇದೇ ಭಾನುವಾರ ತಮ್ಮ ಹುಟ್ಟುಹಬ್ಬ ಇರುವ ಹಿನ್ನೆಲೆ ಭಾನುವಾರದವರೆಗೂ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಬಗ್ಗೆ ಕ್ರಮಕೈಗೊಳ್ಳಿ – ರಾಷ್ಟ್ರಪತಿಗೆ ಭಜರಂಗದಳದಿಂದ ಪತ್ರ
Advertisement
Advertisement
ಸೋಮವಾರದಿಂದ ಬುಧವಾರದವರೆಗೂ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ ಸುಮಾರು 16 ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಗುರುವಾರ ಬಿಡುವು ನೀಡಿದ್ದ ಇಡಿ ಶುಕ್ರವಾರ ವಿಚಾರಣೆ ಹಾಜರಾಗಲು ಸಮನ್ಸ್ ನೀಡಿತ್ತು. ಆದರೆ ಈ ನಡುವೆ ಈ ಪತ್ರ ಬರೆದು ವಿನಾಯಿತಿ ಕೋರಿದ್ದರು. ಇದೀಗ ಇಡಿ ಅಧಿಕಾರಿಗಳು ರಾಹುಲ್ ಗಾಂಧಿಗೆ ಅನುಮತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್- ಬೆಂಗಳೂರು ಸೇರಿ 21 ಕಡೆ ದಾಳಿ
Advertisement
Advertisement
ಸೋಮವಾರದವರೆಗೂ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿವೆ. ರಾಹುಲ್ ಗಾಂಧಿ ವಿಚಾರಣೆಯಿಂದ ಬ್ರೇಕ್ ತೆಗೆದುಕೊಂಡ ಹಿನ್ನೆಲೆ ಎಲ್ಲ ಕಾಂಗ್ರೆಸ್ ನಾಯಕರಿಗೂ ಕ್ಷೇತ್ರಕ್ಕೆ ತೆರಳಿ ಸೋಮವಾರ ದೆಹಲಿಗೆ ಮರಳುವಂತೆ ಸೂಚಿಸಿದ್ದಾರೆ.