ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಕರ್ನಾಟಕ ಭಜರಂಗದಳ ಸುದೀರ್ಘ ಪತ್ರ ಬರೆದಿದೆ.
Advertisement
ಶ್ರೀರಾಮ ನವಮಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ, ದಾಳಿ ನಡೆಸಲಾಗಿದೆ. ಇದರಿಂದ ಹಿಂದೂ ಸಮಾಜ ತಾಳ್ಮೆ ಕಾಯ್ದುಕೊಂಡಿತ್ತಾದರೂ ಶಾಂತವಾಗಿ ವರ್ತಿಸುತ್ತಿದ್ದೇವೆ. ಹಾಗಾಗಿ, ಜಿಹಾದಿ ಧರ್ಮಾಂಧತೆ ಬಗ್ಗೆ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್- ಬೆಂಗಳೂರು ಸೇರಿ 21 ಕಡೆ ದಾಳಿ
Advertisement
Advertisement
ಪತ್ರದಲ್ಲಿ ಏನಿದೆ?
* ನಮಾಜ್ ಮುಗಿಸಿ ಬರುವ ಯುವಕರನ್ನು ಪ್ರಚೋದಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು
* ಮುಲ್ಲಾಗಳು/ಮೌಲ್ವಿಗಳು ಅಥವಾ ಬೇರೆಯವರು ಜಿಹಾದಿ ಭಾಷಣ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು
* ಬೆದರಿಕೆಗೆ ಒಳಗಾದವರಿಗೆ ಭದ್ರತೆಯನ್ನು ಒದಗಿಸಬೇಕು
* ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
* ಎನ್‍ಐಎಯಿಂದ ಗಲಭೆ ನಡೆದ ರಾಜ್ಯಗಳಲ್ಲಿ ತನಿಖೆಗೆ ಆದೇಶಿಸಬೇಕು
* ಪಿಎಫ್‍ಐ, ತಬ್ಲಿಘಿ ಜಮಾತ್‍ನಂತಹ ಸಂಘಟನೆಗಳ ಮೇಲೆ ತಕ್ಷಣ ಶಾಶ್ವತ ನಿಷೇಧ ಹೇರಬೇಕು
* ಹಿಂದೂ ಅಲ್ಪಸಂಖ್ಯಾತರಾಗಿರುವ ಸ್ಥಳಗಳಲ್ಲಿ ಭದ್ರತೆಗೆ ವ್ಯವಸ್ಥೆ ಮಾಡಬೇಕು.