ಹುಬ್ಬಳ್ಳಿ: ಕೇಂದ್ರ ಸರ್ಕಾರದಿಂದ ರಾಷ್ಟ್ರಧ್ವಜ ನೀತಿ ಸಂಹಿತೆ ತಿದ್ದುಪಡಿಗೆ ಕಾಂಗ್ರೆಸ್ ವಿರೋಧದ ಹಿನ್ನೆಲೆ, ರಾಷ್ಟ್ರಧ್ವಜ ರಕ್ಷಣಾ ಅಭಿಯಾನವನ್ನು ಯೂತ್ ಕಾಂಗ್ರೆಸ್ ನಡೆಸುತ್ತಿದೆ. ಈ ಅಭಿಯಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ರಾಷ್ಟ್ರಧ್ವಜ ಕಾಣಿಕೆ ನೀಡುವ ಮೂಲಕ ವಿಭಿನ್ನವಾಗಿ ಚಾಲನೆ ನೀಡಲಾಗಿದೆ.
ವಿದ್ಯಾನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯಲ್ಲಿರುವ ಶೆಟ್ಟರ್ ಮನೆಗೆ ತೆರಳಿ ಧ್ವಜ ಕಾಣಿಕೆ ನೀಡಿ, ಖಾದಿಯಿಂದ ತಯಾರಿಸಿದ ಧ್ವಜವನ್ನೇ ಮನೆಯ ಮೇಲೆ ಹಾರಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: ನನ್ನ ತಪ್ಪುಗಳಿಂದ ರಾಷ್ಟ್ರಗೀತೆ ಮೊಳಗಲಿಲ್ಲ – ಅದು ತಪ್ಪಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ: ಮೋದಿ
ಹೊಸ ತಿದ್ದುಪಡಿಯಲ್ಲಿ ಪಾಲಿಸ್ಟರ್ ಬಟ್ಟೆಯ ಧ್ವಜಗಳಿಗೆ ಮತ್ತು ಯಂತ್ರದಿಂದ ತಯಾರಿಸಿದ ರಾಷ್ಟ್ರಧ್ವಜಗಳಿಗೂ ಅವಕಾಶ ನೀಡಿರುವ ಹಿನ್ನೆಲೆ, ಈ ನೀತಿಗೆ ವಿರೋಧಿಸಿ ಕಾಂಗ್ರೆಸ್ ಅಭಿಯಾನ ಆರಂಭಿಸಿದೆ. ಇತ್ತಿಚೇಗೆ ರಾಜ್ಯಕ್ಕೆ ಆಗಮಿಸಿದ್ದಾಗ ಖಾದಿ ಗ್ರಾಮೋದ್ಯೋಗಕ್ಕೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಇದನ್ನೂ ಓದಿ: ಶೂ ಹಾಕಿಕೊಂಡೆ ದಸರಾ ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಉಮೇಶ್ ಕತ್ತಿ