CinemaLatestMain PostSouth cinema

ಆಲಿಯಾ ಜಾಗಕ್ಕೆ ರಶ್ಮಿಕಾ ಮಂದಣ್ಣ: ಜ್ಯೂ.ಎನ್‌ಟಿಆರ್‌ ಚಿತ್ರಕ್ಕೆ ನ್ಯಾಷನಲ್ ಕ್ರಶ್ ಫೈನಲ್

`ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ಕಾಣಸಿಕೊಳ್ಳಲು ಸಜ್ಜಾಗಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಆಲಿಯಾ ಭಟ್ ಬದಲು ರಶ್ಮಿಕಾ ಫೈನಲ್ ಆಗಿದ್ದಾರೆ.

ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರ ಸೌಂಡ್ ಮಾಡಿದ ಮೇಲೆ ಜ್ಯೂ.ಎನ್‌ಟಿಆರ್ ಇದೀಗ ಹೊಸ ಚಿತ್ರದಲ್ಲಿ ನಟಿಸಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. `ಆರ್‌ಆರ್‌ಆರ್’ ಚಿತ್ರದ ಮೂಲಕ ಟಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದ ಬಿಟೌನ್ ಬ್ಯೂಟಿ ಆಲಿಯಾ ಭಟ್ ಕಾರಣಾಂತರಗಳಿಂದ ಜ್ಯೂ.ಎನ್‌ಟಿಆರ್ ಚಿತ್ರದಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ನಟನೆಯ ಹೊಸ ಚಿತ್ರಕ್ಕೆ `ಪುಷ್ಪ’ ಬ್ಯೂಟಿ ರಶ್ಮಿಕಾರನ್ನ ಫೈನಲ್ ಮಾಡಿದ್ದಾರೆ. ಈಗಾಗಲೇ `ಪುಷ್ಪ’ ಸಕ್ಸಸ್ ಅಲೆಯಲ್ಲಿ ತೆಲುತ್ತಿರೋ ಕೊಡಗಿನ ಕುವರಿಗೆ ಸೌತ್‌ನಿಂದ ನಾರ್ತ್‌ ಚಿತ್ರರಂಗದವರೆಗೂ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಿಗ್‌ ಸ್ಟಾರ್‌ಗಳ ಜತೆಗೇನೆ  ತೆರೆಹಂಚಿಕೊಳ್ತಿದ್ದಾರೆ. ಯಂಗ್ ಟೈಗರ್ ಮತ್ತು ನ್ಯಾಷನಲ್ ಕ್ರಶ್ ಒಟ್ಟಿಗೆ ಸಿನಿಮಾ ಮಾಡ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Leave a Reply

Your email address will not be published.

Back to top button