ಫಾರೂಕ್‌ ಅಬ್ದುಲ್ಲಾರನ್ನು ತಬ್ಬಿ ಯಾತ್ರೆಗೆ ಸ್ವಾಗತಿಸಿದ ರಾಹುಲ್‌ ಗಾಂಧಿ

Public TV
1 Min Read
National Conference president Farooq Abdullah joined the Bharat Jodo Yatra in Uttar Pradesh Rahul Gandhi hugs

ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಇಂದು ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo) ರಾಹುಲ್‌ ಗಾಂಧಿ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಗೆ ಆಗಮಿಸಿದ ಫಾರೂಕ್‌ ಅಬ್ದುಲ್ಲಾ ಅವರನ್ನು ರಾಹುಲ್‌ ಗಾಂಧಿ(Rahul Gandhi ) ತಬ್ಬಿಕೊಂಡು ಸ್ವಾಗತಿಸಿದರು. ಈ ವೇಳೆ ಪ್ರಿಯಾಂಕಾ ಗಾಂಧಿ(Priyanka Gandhi) ಫಾರೂಕ್‌ ಅವರ ಕೈಯನ್ನು ಹಿಡಿದು ಬರ ಮಾಡಿಕೊಂಡರು.

 

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಸೇರಲು ನೋಯ್ಡಾದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಗಾಜಿಯಾಬಾದ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ- ರಾಗಾಗೆ ಅಯೋಧ್ಯೆ ಪ್ರಧಾನ ಅರ್ಚಕ ಪತ್ರ

9 ದಿನಗಳ ವಿರಾಮದ ನಂತರ ಮಂಗಳವಾರ ಪಾದಯಾತ್ರೆ ಮತ್ತೆ ಪುನರಾರಂಭವಾಗಿದ್ದುಉತ್ತರ ಪ್ರದೇಶವನ್ನು ಪ್ರವೇಶಿಸಿದೆ.

Rahul Gandhi Priyanka Gandhi 1

ಈ ಹಿಂದೆ ಶ್ರೀನಗರದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌, ಫಾರೂಕ್‌ ಅಬ್ದುಲ್ಲಾ,ಮೆಹಬೂಬಾ ಮುಫ್ತಿ, ಒಮರ್‌ ಅಬ್ದುಲ್ಲಾ ಭಾರತ್‌ ಜೋಡೋ ಯಾತ್ರೆಯನ್ನು ಸೇರಲಿದ್ದಾರೆ ಎಂದು ತಿಳಿಸಿದ್ದರು.

ಭಾರತ್‌ ಜೋಡೋ ಯತ್ರಾ ಸೆ.7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದ್ದು 3,570 ಕಿ.ಮೀ ಕ್ರಮಿಸಿ ಜ.26 ರಂದು ಶ್ರೀನಗರದಲ್ಲಿ ಮುಕ್ತಾಯವಾಗಲಿದೆ. ಜ. 22 ರಂದು ಜಮ್ಮು ಕಾಶ್ಮೀರವನ್ನು ಪ್ರವೇಶಿಸಲಿರುವ ಯಾತ್ರೆ 4 ದಿನಗಳ ಕಾಲ ನಡೆಯಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *