ಕನ್ನಡದ ‘ನಟಸಾರ್ವಭೌಮ’ (Natasaarvabhowma) ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಸದಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಅನುಪಮಾ ಪರಮೇಶ್ವರನ್ ಇದೀಗ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸುತ್ತಿರುವ ಪುನೀತ್ ರಾಜ್‌ಕುಮಾರ್ ನಾಯಕಿ ಅನುಪಮಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರವಿತೇಜಾಗೆ ನಾಯಕಿಯಾಗಿ ‘ಈಗಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಿಲ್ಲು 2 ಚಿತ್ರದಲ್ಲೂ ಅನುಪಮಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೀತೆ ಭಾರತದ ಮಗಳಲ್ಲ: ‘ಆದಿಪುರುಷ’ ಸಿನಿಮಾ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ಗರಂ
ಕನ್ನಡದ ‘ನಟಸಾರ್ವಭೌಮ’ ನಾಯಕಿ ಅನುಪಮಾ, ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿರುವ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹಳದಿ ಬಣ್ಣ ಧಿರಿಸಿನಲ್ಲಿ ನಟಿ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಕರ್ಲಿ ಹೇರ್ ಫ್ರಿಯಾಗಿ ಬಿಟ್ಟು ಮಿರರ್ ಸೆಲ್ಫಿ ಶೇರ್ ಮಾಡಿದ್ದಾರೆ. ನಟಿ ಎದೆಯ ಮೇಲೆ ಟ್ಯಾಟೂ ಹಾಕಿಸಿರೋದು ಫೋಟೋದಲ್ಲಿ ಹೈಲೆಟ್ ಆಗಿದೆ. ಅನುಪಮಾ ಹಾಟ್ ಲುಕ್ ನೋಡಿ, ನಿಮ್ಮ ಮೇಲೆ ಇದ್ದ ಅಭಿಮಾನ ಕಮ್ಮಿಯಾಯ್ತು. ದಯವಿಟ್ಟು ಈ ತರಹ ಎಕ್ಸ್‌ಪೋಸ್ ಮಾಡಬೇಡಿ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ.
ನಿಜಕ್ಕೂ ಇದು ನೀವೇನಾ? ನಿಮ್ಮನ್ನು ಈ ರೀತಿ ನೋಡಲು ನಾವು ಇಷ್ಟಪಡಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ, ಅನುಪಮಾ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಈ ಫೋಟೋಗೆ ಭರ್ಜರಿ ಲೈಕ್ಸ್, ಕಾಮೆಂಟ್ ಬಂದಿದೆ. ಒಂದು ವರ್ಗದ ಜನರಿಗೆ ಅನುಪಮಾ ಪರಮೇಶ್ವರನ್ ಟ್ಯಾಟೂ ಇಷ್ಟ ಆಗಿದೆ.