– ನಿಸಾರ್ ಕಳುಹಿಸುವ ದತ್ತಾಂಶ ಎಲ್ಲಾ ದೇಶಗಳ ಅಧ್ಯಯನಕ್ಕೆ ಫ್ರೀ ಫ್ರೀ ಫ್ರೀ
– 13,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಉಪಗ್ರಹ
ಬೆಂಗಳೂರು/ವಾಷಿಂಗ್ಟನ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ʻನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್ NISAR)ʼ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:40ಕ್ಕೆ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ.
GSLV-F16/NISAR
Today’s the day!
Launch Day has arrived for GSLV-F16 & NISAR. GSLV-F16 is standing tall on the pad. NISAR is ready. Liftoff today.
🗓️ July 30, 2025
Live from: 17:10 Hours IST
Liftoff at : 17:40 Hours IST
Livestreaming Link: https://t.co/flWew2LhgQ
For more… pic.twitter.com/bIjVJTZyMv
— ISRO (@isro) July 30, 2025
ಈ ಉಪಗ್ರಹವು ಶ್ರೀಹರಿಕೋಟದಿಂದ (Sriharikota) ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ. ಅಲ್ಲದೇ ನಿರ್ಗಲ್ಲು, ಹಿಮಫಲಕಗಳ ಬದಲಾವಣೆ, ಮಣ್ಣಿನಲ್ಲಿರುವ ತೇವಾಂಶ, ಪ್ರವಾಹ, ಅರಣ್ಯ ನಾಶ, ಬೆಳೆಯ ಆರೋಗ್ಯ, ನಗರೀಕರಣ ಮತ್ತು ಸೌಕರ್ಯಗಳ ಬದಲಾವಣೆ ಮುಂತಾದ ವಿಷಯಗಳನ್ನು ಒದಗಿಸಲಿದೆ. ಇದು ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಇದರೊಡನೆ ಭಾರತ – ಅಮೆರಿಕದ ಮುಂದಿನ ಬಹು ವರ್ಷಗಳ ಬಾಹ್ಯಾಕಾಶ ಸಹಕಾರ ಆರಂಭಗೊಳ್ಳಲಿದೆ. ಕಕ್ಷೆಯತ್ತ ರಾಕೆಟ್‌ನ ಪ್ರಯಾಣ ಬಹುತೇಕ 19 ನಿಮಿಷ ತೆಗೆದುಕೊಳ್ಳಲಿದೆ. ಆ ಬಳಿಕ, ನಿಸಾರ್ ಉಪಗ್ರಹವನ್ನು ಅದರ ಉದ್ದೇಶಿತ-747 ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಈ ಯೋಜನೆಯನ್ನು ವಿಶೇಷವಾಗಿಸುವುದು ಕೇವಲ ಅದರ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯಗಳು ಮಾತ್ರವಲ್ಲ. ಬದಲಿಗೆ, ನಿಸಾರ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತೋರಿದ ತಾಳ್ಮೆ ಮತ್ತು ನಿಖರತೆಗಳೂ ಅಷ್ಟೇ ಮುಖ್ಯವಾಗಿವೆ.
GSLV-F16/NISAR Launch
Join us LIVE as GSLV-F16 lifts NISAR into orbit.
🗓️ July 30, 2025
Live from: 17:10 Hours
Liftoff at : 17:40 Hours
Link: https://t.co/flWew2LhgQ#NISAR #GSLVF16 #ISRO #NASA
— ISRO (@isro) July 26, 2025
13,000 ಕೋಟಿ ವೆಚ್ಚ:
ಇನ್ನೂ ನಿಸಾರ್ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದ್ದು, 12 ದಿನಗಳಿಗೆ ಒಮ್ಮೆ ಇಡೀ ಭೂಮಿ ಸುತ್ತಲಿದೆ. ಮುಖ್ಯವಾಗಿ ನಿಸಾರ್ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.
ಕಕ್ಷೆಯತ್ತ ಪಯಣ ಮತ್ತು ಅದರಾಚೆಗಿನ ಕಾರ್ಯ
ನಿಸಾರ್ ಉಪಗ್ರಹ ಭೂಮಿಯಿಂದ 747 ಕಿಲೋಮೀಟರ್ ಎತ್ತರದಲ್ಲಿರುವ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಿದ ಬಳಿಕ ಅದರ ನೈಜ ಕಾರ್ಯ ಆರಂಭಗೊಳ್ಳುತ್ತದೆ. ಕಕ್ಷೆಗೆ ಸೇರಿದ ಬಳಿಕ, ಉಪಗ್ರಹದ 90 ದಿನಗಳ ಅವಧಿಯ, ಮುಖ್ಯವಾದ ‘ಕಮಿಷನಿಂಗ್ ಹಂತ’ ಆರಂಭಗೊಳ್ಳುತ್ತದೆ. ಇದನ್ನು ‘ಇನ್ ಆರ್ಬಿಟ್ ಚೆಕೌಟ್’ ಎಂದೂ ಕರೆಯಲಾಗಿದ್ದು, ಈ ಅವಧಿಯಲ್ಲಿ ಉಪಗ್ರಹವನ್ನು ಅದರ ವೈಜ್ಞಾನಿಕ ಗುರಿಗಳಿಗೆ ಸೂಕ್ತವಾಗಿ ಸಿದ್ಧಪಡಿಸಲಾಗುತ್ತದೆ. ಅಂದರೆ, ಉಪಗ್ರಹ ಇಂದು ಸಂಜೆ ಉಡಾವಣೆಗೊಂಡರೂ, ನಿಸಾರ್ ಅದರ ಸಂಪೂರ್ಣ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ತೊಡಗಲು ಭಾರತ ಅಕ್ಟೋಬರ್ ತಿಂಗಳ ಕೊನೆಯ ಭಾಗದ ತನಕ ಕಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಕಮಿಷನಿಂಗ್ ಹಂತದ ವಿಶೇಷತೆ ಏನು?
ಕಮಿಷನಿಂಗ್ ಹಂತದ ವಿಶೇಷ ಅಂಶವೆಂದರೆ, ನಿಸಾರ್ ಉಪಗ್ರಹದ 12 ಮೀಟರ್ ವ್ಯಾಸ ಹೊಂದಿರುವ ಬೃಹತ್ ಪ್ರತಿಫಲಕವನ್ನು (ರಿಫ್ಲೆಕ್ಟರ್) ಬಾಹ್ಯಾಕಾಶದಲ್ಲಿ ಬಿಡಿಸುವುದಾಗಿದೆ. ಇದು ಭೂ ವೀಕ್ಷಣಾ ಉಪಗ್ರಹದೊಡನೆ ಇಲ್ಲಿಯ ತನಕ ಬಾಹ್ಯಾಕಾಶಕ್ಕೆ ತೆರಳಿರುವ ಅತಿದೊಡ್ಡ ಆ್ಯಂಟೆನಾ ಆಗಿದೆ. ಈ ಬೃಹತ್ ಆ್ಯಂಟೆನಾವನ್ನು ಬಾಹ್ಯಾಕಾಶದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆದಾಗ ಅದು ಬಹುತೇಕ ಒಂದು ಟೆನ್ನಿಸ್ ಆಟದ ಮೈದಾನದಷ್ಟು ದೊಡ್ಡದಾಗಿರಲಿದೆ. ಇದನ್ನು ಬಾಹ್ಯಾಕಾಶದ ತೀವ್ರ ವಾತಾವರಣದಲ್ಲಿ ಅತ್ಯಂತ ಜಾಗರೂಕವಾಗಿ ಬಿಡಿಸಬೇಕಾಗುತ್ತದೆ. ಆ್ಯಂಟೆನಾ ಬಿಡಿಸುವಿಕೆ ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಅದರ ಪ್ರತಿಯೊಂದು ಹಂತವನ್ನೂ ಇಂಜಿನಿಯರ್‌ಗಳು ವರ್ಷಾನುಗಟ್ಟಲೆ ಭೂಮಿಯಲ್ಲೇ ನಿಖರವಾಗಿ ಅಭ್ಯಾಸ ನಡೆಸಿ, ಕರಾರುವಾಕ್ಕಾಗಿ ರೂಪಿಸಿದ್ದಾರೆ.