Bengaluru CityCinemaKarnatakaLatestSandalwoodSouth cinema

ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ

ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ಕೆಲ ತಿಂಗಳುಗಳಿಂದ ಸಂಚಲನ ಮೂಡಿಸಿದ ವಿಚಾರ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಲವ್ವಿ ಡವ್ವಿ ವಿಚಾರ. ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ನರೇಶ್ ವಿಷ್ಯಕ್ಕೆ ಹೊಸ ಟ್ವಿಸ್ಟೊಂದು ಸಿಕ್ಕಿದೆ. ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

ಸದ್ಯ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಚಾರ. ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ (Ramya Raghupathi) ಸಂಬಂಧದಲ್ಲಿ ಸಾಕಷ್ಟು ಬಿರುಕು ಬಂದ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದರು. ಈ ವೇಳೆ ನರೇಶ್ ಮತ್ತು ಪವಿತ್ರಾ ನಡುವೆ ಸಂಬಂಧವಿರುವ ವಿಚಾರ ಬೆಳಕಿಗೆ ಬಂದಿತ್ತು.

ಬೆಂಗಳೂರಿನಲ್ಲಿ ಸಾಕಷ್ಟು ರಂಪಾಟದ ನಂತರ ಮೈಸೂರು ಹೋಟೆಲ್‌ವೊಂದರಲ್ಲಿ ನರೇಶ್ ಮತ್ತು ಪವಿತ್ರಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮೂವರು ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ನರೇಶ್ ಮನೆಗೆ ರಮ್ಯಾ ರಘುಪತಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೆಲ್ಲಾ ಗಲಾಟೆಯ ನಂತರ ನರೇಶ್ ಹೆದರಿದ್ದಾರೆ. ಈಗ ಪತ್ನಿ ರಮ್ಯಾ ಅವರನ್ನ ಮನೆಗೆ ಸೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ

ಇನ್ನೂ ಪತಿ ನರೇಶ್ ಮನೆಗೆ ರಮ್ಯಾ ಎಂಟ್ರಿ ಕೊಟ್ಟರು ಕೂಡ ಕಾನೂನು ಸಮರ ನಿಲ್ಲಿಸಿಲ್ಲ. ಇವೆಲ್ಲದರ ನಡುವೆ ಪವಿತ್ರಾ ಲೋಕೇಶ್ ಮುಂದಿನ ನಡೆಯೇನು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದೆ.

Live Tv

Leave a Reply

Your email address will not be published.

Back to top button