ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಾಂಬಿನೇಷನ್ ನ ‘ಮತ್ತೆ ಮದುವೆ’ (Matte Maduve) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ (Teaser) ಮೂಲಕ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೇ ಸಿನಿಮಾ ಮಾಡಿದ ಎಲ್ಲ ಕುರುಹುಗಳನ್ನು ನರೇಶ್ ಬಿಟ್ಟುಕೊಟ್ಟಿದ್ದಾರೆ. ಅಲ್ಲದೇ, ಕಾನೂನು ಮೂಲಕ ಹೋರಾಟ ಮಾಡುತ್ತಿರುವ ಪತ್ನಿ ರಮ್ಯಾ ಅವರಿಗೆ ಟಾಂಗ್ ಕೂಡ ಕೊಟ್ಟಿದ್ದಾರೆ.
- Advertisement 2
ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರನ್ನು ಮೈಸೂರು ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿಟ್ಟಿದ್ದರು ರಮ್ಯಾ. ಆ ದೃಶ್ಯವನ್ನೂ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅಲ್ಲದೇ, ಮಾಧ್ಯಮಗಳ ಮುಂದೆ ರಮ್ಯಾ ಮಾಡಿರುವ ಅಷ್ಟೂ ಆಪಾದನೆಗಳನ್ನೂ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಟೀಸರ್ ನಲ್ಲಿ ಬಂದ ರಮ್ಯಾ ಪಾತ್ರ ಹೇಳುತ್ತಿದೆ. ಹೀಗಾಗಿ ಈ ಮೂಲಕ ಅನೇಕ ವಿಷಯಗಳಲ್ಲಿ ಪತ್ನಿಗೆ ನರೇಶ್ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ
- Advertisement 3
- Advertisement 4
ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಲವ್ವಿಡವ್ವಿ ವಿಚಾರ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವರ್ಷದ ಮೊದಲ ದಿನದಿಂದ ಈವರೆಗೂ ಒಂದಿಲ್ಲೊಂದು ವಿಚಾರಕ್ಕಾಗಿ ಈ ಇಬ್ಬರೂ ಸುದ್ದಿಯಲ್ಲಿದ್ದಾರೆ. ಮದುವೆ, ಹನಿಮೂನ್ ಅಂತೆಲ್ಲ ಫೋಟೋ ಹಂಚಿಕೊಳ್ಳುತ್ತಿದ್ದವರ ನಿಜಬಣ್ಣ ಈಗ ಬಯಲಾಗಿದೆ. ಈ ಎಲ್ಲವೂ ಖಾಸಗಿ ವಿಚಾರವಲ್ಲ, ಅವು ಸಿನಿಮಾಗಾಗಿ ಮಾಡಿದ ದೃಶ್ಯಗಳು ಎಂದು ನಿರ್ದೇಶಕ ಎಂ.ಎಸ್.ರಾಜು (MS Raju) ಹೇಳಿಕೊಂಡಿದ್ದರು. ಅದು ಟೀಸರ್ ಮೂಲಕ ನಿಜವಾಗಿದೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ರಾಜು. ಅವರವರ ಪಾತ್ರಗಳನ್ನು ಅವರೇ ಮಾಡಿದ್ದಾರಂತೆ. ಅಲ್ಲದೇ, ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಮದುವೆ ಫೋಟೋ ರಿಲೀಸ್ ಆದ ಬೆನ್ನಲ್ಲೇ ಸದ್ದಿಲ್ಲದೇ ದುಬೈಗೆ (Dubai) ಹಾರಿದ್ದರು. ಕೆಲ ದಿನಗಳ ಕಾಲ (Honeymoon) ದುಬೈನಲ್ಲಿ ಈ ಜೋಡಿ ಕಳೆದಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಎಲ್ಲವೂ ಸಿನಿಮಾದಲ್ಲಿ ಇರಲಿವೆಯಂತೆ.
ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ತೆಲುಗು ನಟ ನರೇಶ್. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಅದು ಮತ್ತೆ ಮದುವೆ ಸಿನಿಮಾದ ದೃಶ್ಯವೆಂದು ಈಗ ಖಚಿತವಾಗಿದೆ.