Bengaluru CityCinemaKarnatakaLatestLeading NewsMain PostSandalwood

ತಮ್ಮದೇ ಕಥೆಯನ್ನ ತೆರೆಯ ಮೇಲೆ ಬಿಚ್ಚಿಡಲಿದ್ದಾರೆ ನರೇಶ್- ಪವಿತ್ರಾ ಲೋಕೇಶ್

ಟಾಲಿವುಡ್‌ನಲ್ಲಿ(Tollywood) ಮತ್ತೆ ಸುದ್ದಿಯಲ್ಲಿದ್ದಾರೆ ನರೇಶ್ ಮತ್ತು ಪವಿತ್ರಾ ಲೋಕೇಶ್(Pavitra Lokesh), ಇಷ್ಟು ದಿನ ತಮ್ಮ ಸ್ನೇಹ ಸಂಬಂಧ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು. ಇದೀಗ ತಮ್ಮದೇ ಕಥೆಯನ್ನ ತೆರೆಯ ಮೇಲೆ ಹೇಳುವುದಕ್ಕೆ ಈ ಜೋಡಿ ಸಜ್ಜಾಗಿದ್ದಾರೆ.

ತೆಲುಗು ಅಂಗಳದ ಹಿರಿಯ ನಟ ನರೇಶ್ (Actor Naresh) ಇತ್ತೀಚೆ ತಂದೆ ಕೃಷ್ಣ ನಿಧನ ನಂತರ ಮತ್ತೊಮ್ಮೆ ಚಾಲ್ತಿಯಲ್ಲಿದ್ದಾರೆ. ರಮ್ಯಾ ರಘುಪತಿ ಜೊತೆಗಿನ ಡಿವೋರ್ಸ್‌ ರಣರಂಗದ ಮಧ್ಯೆ ಪವಿತ್ರಾ ಲೋಕೇಶ್ ಹೆಸರು ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಷ್ಟೇಲ್ಲಾ ಸದ್ದು ಗದ್ದಲದ ನಡುವೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ತಮ್ಮ ಬಾಂಧವ್ಯ ಕಥೆಯನ್ನ ತೆರೆಯ ಮೇಲೆ ತೋರಿಸಲು ನರೇಶ್ ಪ್ಲ್ಯಾನ್ ಮಾಡಿದ್ದಾರೆ.

ನರೇಶ್‌ಗೆ ರಮ್ಯಾ ರಘುಪತಿ ಮೂರನೇ ಹೆಂಡತಿಯಾಗಿದ್ದರು. ಮದುವೆಯಾಗಿ ಕೆಲವೇ ರ‍್ಷಗಳಲ್ಲಿ ಈ ಸಂಬಂಧಕ್ಕೂ ಫುಲ್ ಸ್ಟಾಪ್ ಇಡಲು ನಟ ತಯಾರಿ ನಡೆಸಿದ ಬೆನ್ನಲ್ಲೇ ಸೈಲೆಂಟ್ ಆಗಿ ಪವಿತ್ರಾ ಎಂಟ್ರಿ ಅಗಿದ್ದರು. ಗಂಡ ಹೆಂಡತಿ ಜಗಳ ದಶದಿಕ್ಕುಗಳಲ್ಲೂ ಸುದ್ದಿ ಮಾಡಿತ್ತು. ಆದರೆ ಯಾರದ್ದು ತಪ್ಪು, ಸರಿ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಬೆನ್ನಲ್ಲೇ ನರೇಶ್, ತಮ್ಮ ಬಾಂದವ್ಯದ ಕಥೆಯನ್ನ ಸಿನಿಮಾ ರೂಪ ಕೊಡಲು ಮುಂದಾಗಿದ್ದಾರೆ. ಇದನ್ನೂ ಓದಿ:ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

ತಮ್ಮ ಕಥೆಗೆ ತಾವೇ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಾ ಅಥವಾ ಬೇರೇ ಕಲಾವಿದರು ಅವರ ಪಾತ್ರಕ್ಕೆ ಜೀವತುಂಬಲಿದ್ದಾರಾ ಎಂಬುದಕ್ಕೆ ಮುಂದೆ ಸ್ಪಷ್ಟನೆ ಸಿಗಲಿದೆ. ಆಡುವವರ ಬಾಯಿಗೆ ಈ ಸಿನಿಮಾ ಉತ್ತರವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button