ಯಾದಗಿರಿ: ಬಿಜೆಪಿಯ (BJP) ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್. ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ತರೋಕೆ ಅವಕಾಶ ಇತ್ತಲ್ವಾ? ಆಗ ಯಾಕೆ ತರಲಿಲ್ಲ? ಹಾಲು ಕೊಡೋದು ಆಗಲೇ ಮಾಡಬಹುದಿತ್ತಲ್ವಾ? ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿನಾ ಜಾಗಟೆ ಹೊಡೆಯುತ್ತಿದ್ದರು. ಫ್ರೀ ಕೊಡಬಾರದು ಅಂತ ಮೋದಿನೇ ಹೇಳುತ್ತಿದ್ದರು. ಈಗ ಅವರಿಗೆ ಘೋಷಣೆ ಮಾಡಲು ಅನುಮತಿ ಯಾರು ಕೊಟ್ರು? ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿಗೆ ಸವಾಲು ಹಾಕಿದ್ದಾರೆ.
ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ನಗರದಲ್ಲಿ ಮಾತನಾಡಿದ ಹೆಚ್‌ಡಿಕೆ, ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಡೂಪ್ಲಿಕೇಟ್ ಅಂತ ಚರ್ಚೆ ಮಾಡುತ್ತಿದ್ದರು. ಹಾಗಿದ್ದರೆ ಇವರದ್ದು ಏನು? ಮೂರುವರೆ ವರ್ಷ ಅಧಿಕಾರದಲ್ಲಿದ್ರು. ಗ್ಯಾಸ್ ಬೆಲೆ ಹೆಚ್ಚಾಗಿದೆ. ಅವಾಗ ಯಾಕೆ ಕಮ್ಮಿ ಮಾಡಲಿಲ್ಲ? ಮೂರುವರೆ ವರ್ಷದಲ್ಲಿ ಹಣ ಲೂಟಿ ಮಾಡೋದು ಬಿಟ್ಟು ಜನಸಾಮಾನ್ಯರ ಬಗ್ಗೆ ನೋಡಲಿಲ್ಲ. ಬರೀ ಜನರ ಜೊತೆ ಚೆಲ್ಲಾಟವಾಡಿದರು. ಈಗ 2 ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಬಗ್ಗೆ ಜನರಲ್ಲಿ ಭ್ರಮನಿರಸನವಿದೆ ಎಂದರು.
Advertisement
Advertisement
ಎನ್‌ಕೌಂಟರ್ ಮಾಡಲಾಗುತ್ತೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ತರಹ ಆದರೆ ಮೊದಲು ಯತ್ನಾಳ್ ಅವರಿಗೆ ಎನ್‌ಕೌಂಟರ್ ಮಾಡಬೇಕಲ್ವಾ? ಅವರ ಪಕ್ಷದಲ್ಲಿ ಯಾರ್ ಯಾರು ಏನೇನು ಮಾತಾಡಿಕೊಂಡಿದ್ದಾರೆ? ನಿರಾಣಿ ಬಗ್ಗೆ ಯತ್ನಾಳ್, ಯತ್ನಾಳ್ ಬಗ್ಗೆ ನಿರಾಣಿ ಏನೇನೋ ಮಾತಾಡಿಕೊಂಡಿಲ್ವಾ? ಮೊದಲು ಇವೆಲ್ಲ ಅವರ ಮೇಲೆ ಮಾಡಬೇಕಲ್ವಾ? ನಾನು ಆ ತರಹದ ಪದಗಳನ್ನು ಬಳಕೆ ಮಾಡಲ್ಲ. ನಾನು ತಮಾಷೆಗೆ ಹೇಳಿದ್ದೇನೆ. ನಾನು ಆ ಮಟ್ಟಕ್ಕೆ ಇಳಿಯಲ್ಲ ಎಂದು ಕುಮಾರಸ್ವಾಮಿ ತಮ್ಮ ಮಾತನ್ನು ಸರಿಪಡಿಸಿಕೊಂಡರು.
Advertisement
Advertisement
ಇಂದು ಸಮಾಜ ಒಡೆಯುವಂತಹ ಕೆಲಸ ಮಾಡುತ್ತಿರುವುದು ಅವರು. ಹಿಂದೂ ಎಂದರೆ ಅರ್ಥ ಏನು ಅಂತ ಯತ್ನಾಳ್ ಅವರು ಹೇಳಬೇಕಲ್ಲ? ಬಿಜೆಪಿಯ ಹಿಂದುತ್ವವಾದಕ್ಕೂ ನಮ್ಮ ದೇಶದ ಸಂಸ್ಕೃತಿ ಹಿಂದುತ್ವವಾದಕ್ಕೂ ವ್ಯತ್ಯಾಸವಿದೆ. ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವ ಸಂದೇಶ ಕೋಡೋದು ಹಿಂದೂ ಧರ್ಮ. ಸಮಾಜ ಹಾಳು ಮಾಡು ಅಂತ ಹೇಳಿಕೊಡುವ ಧರ್ಮ ಅಲ್ಲ. ಇದು ಹಿಂದೂ ಧರ್ಮದ ಹೆಸರಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅಮಾಯಕ ಯುವಕರನ್ನು ಬಲಿ ತೆಗೆದುಕೊಳ್ಳೋದಕ್ಕೆ ಹಿಂದೂ ಧರ್ಮ ಹೇಳಿಲ್ಲ. ಅಧಿಕಾರ ಹಿಡಿಯೋದಕ್ಕೆ ಇವರು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ ಗ್ಯಾರಂಟಿಗಳು ಮೆಹಂದಿಯಷ್ಟೇ ಗ್ಯಾರಂಟಿ: ಸುಧಾಕರ್ ವ್ಯಂಗ್ಯ
ನಾಡಿನ ಜನತೆ ನೆಮ್ಮದಿಯಿಂದ ಬದುಕಲು ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ. 5 ವರ್ಷ ಅಧಿಕಾರ ಕೊಡಿ ಎಂದು ಕೇಳುತ್ತಿದ್ದೇನೆ ಏಕೆಂದರೆ, ಸಮಾಜದಲ್ಲಿ ಅಶಾಂತಿಯ ವಾತಾವರಣ ಬರದೆ ಜನ ನೆಮ್ಮದಿಯಿಂದ ಬದುಕಬೇಕು ಅನ್ನೋದು ನಮ್ಮ ಕಾರ್ಯಕ್ರಮದ ಉದ್ದೇಶ. ಮೋದಿ ಹೇಳುತ್ತಾರೆ, ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕಾಂಗ್ರೆಸ್‌ಗೆ ಹಾಕಿದ ಹಾಗೆ ಅಂತ. ಇತ್ತ ಸಿದ್ದರಾಮಯ್ಯನವರು ಜೆಡಿಎಸ್‌ಗೆ ವೋಟ್ ಹಾಕಿದ್ರೆ ವೇಸ್ಟ್ ಆಗುತ್ತೆ ಅಂತ ಹೇಳ್ತಾರೆ. ನಾನು ಹೇಳುತ್ತೇನೆ, ಜೆಡಿಎಸ್‌ಗೆ ನೀಡುವ ಮತ ಕನ್ನಡ ನಾಡಿಗೆ ಹಿತ ಅಂತ ನುಡಿದರು. ಇದನ್ನೂ ಓದಿ: ನನ್ನ ಆತ್ಮೀಯರ ಮೇಲೆ ಐಟಿ ರೇಡ್ ಮಾಡುವ ಹುನ್ನಾರ ನಡೆದಿದೆ: ವಿನಯ್ ಕುಲಕರ್ಣಿ