ನವದೆಹಲಿ: ಸ್ಥಳೀಯ ಮುಖಂಡರ ಸಹಾಯ ಪಡೆಯುವ ಮೂಲಕ ವ್ಯಾಕ್ಸಿನೇಷನ್ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಡಿಮೆ ವ್ಯಾಕ್ಸಿನೇಷನ್ ವರದಿ ಮಾಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ಮೋದಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಒಂದು ಕೋಟಿ ಡೋಸ್ ನೀಡಿದ ಬಳಿಕವೂ ಹಲವು ಜಿಲ್ಲೆಗಳು ವ್ಯಾಕ್ಸಿನೇಷನ್‍ನಲ್ಲಿ ಹಿಂದೆ ಬಿದ್ದಿದ್ದು, ಈ ಜಿಲ್ಲೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಸಾಧನೆಗೆ ಬೇಸರ ವ್ಯಕ್ತಪಡಿಸಿದ ಅವರು ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
Advertisement
Advertisement
ವ್ಯಾಕ್ಸಿನೇಷನ್ ಹೆಚ್ಚಿಸಲು ಸಣ್ಣ ಸಣ್ಣ ತಂಡಗಳನ್ನು ರಚಿಸಲು ಸೂಚಿಸಿದ ಅವರು, ಪ್ರತಿ ಹಳ್ಳಿ, ಪಟ್ಟಣಗಳಿಗೆ ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸಿ ಎಂದು ಮೋದಿ ಹೇಳಿದರು. ಅಲ್ಲದೇ ಪ್ರತಿ ಮನೆ ಮನೆಗೂ ತಲುಪಿ ಜನರನ್ನು ಕರೆ ತನ್ನಿ, ಅವಶ್ಯವಾದರೆನೆಗೆ ತೆರಳಿ ವ್ಯಾಕ್ಸಿನ್ ನೀಡಲು ಮೋದಿ ಸಭೆಯಲ್ಲಿ ಸೂಚನೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
Advertisement
Advertisement
ರೋಗ ಮತ್ತು ಶತ್ರುಗಳ ವಿರುದ್ಧ ಕಡೆಯವರೆಗೂ ಹೋರಾಡಬೇಕು, ಒಂದು ಕೋಟಿ ಡೋಸ್ ಆಯಿತು ಎಂದು ಸುಮ್ಮನೆ ಕೂರುವಂತಿಲ್ಲ ಎರಡನೇ ಡೋಸ್ ಅನ್ನು ಜನರಿಗೆ ಅಗತ್ಯವಾಗಿ ನೀಡಬೇಕು. ಈ ನಿಟ್ಟಿನಲ್ಲಿ ಜನರನ್ನು ಗುರುತಿಸಿ ವ್ಯಾಕ್ಸಿನ್ ಪಡೆಯಲು ಪ್ರೇರೆಪಿಸಲು ಮೋದಿ ಹೇಳಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ
ವ್ಯಾಕ್ಸಿನೇಷನಗೆ ಮೌಡ್ಯ ಅಡ್ಡಿ ಉಂಟು ಮಾಡುತ್ತಿದ್ದು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ಸ್ಥಳೀಯ ಧಾರ್ಮಿಕ ಮುಖಂಡರ ಸಹಾಯ ಪಡೆದು ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಪ್ರಯತ್ನಿಸಿ ಎಂದ ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲೂ ಇದೇ ಪ್ರಯೋಗ ನಡೆದಿದೆ ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್