– ರಾಹುಲ್ ಗಾಂಧಿ ಪ್ರಧಾನಿಯಾಗಲು ಪಾಕ್ ಪ್ರಾರ್ಥನೆ
ಗಾಂಧಿನಗರ: ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಭೂತಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಪಕ್ಷ ಇಲ್ಲಿ ಸಾಯುತ್ತಿದ್ದರೆ, ಅಲ್ಲಿ ಪಾಕಿಸ್ತಾನ ಅಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
Rahul on fire …. https://t.co/6pi1mL0bQN
— Ch Fawad Hussain (@fawadchaudhry) May 1, 2024
Advertisement
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌದರಿ ರಾಹುಲ್ ಗಾಂಧಿ ಭಾಷಣಕ್ಕೆ ಮೆಚ್ಚುಗೆ ಸೂಚಿಸಿದ್ದನ್ನು ಉಲ್ಲೇಖಿಸಿಸಿ ಗುಜುರಾತ್‍ನ (Gujarat) ಆನಂದ್‍ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಯುವರಾಜ (ರಾಹುಲ್ ಗಾಂಧಿ) ಪ್ರಧಾನ ಮಂತ್ರಿಯಾಗಲಿ ಎಂದು ಪಾಕಿಸ್ತಾನ ಪ್ರಾರ್ಥಿಸುತ್ತಿದೆ. ಕಾಂಗ್ರೆಸ್ ಪಾಕಿಸ್ತಾನದ ಅನುಯಾಯಿ, ದುರ್ಬಲ ಸರ್ಕಾರ ಭಾರತದಲ್ಲಿ ಚುಕ್ಕಾಣಿ ಹಿಡಿಯಬೇಕೆಂದು ವಿಶ್ವದ ಕೆಲವು ಶಕ್ತಿಗಳು ಬಯಸುತ್ತವೆ. ನಾವು `ಲವ್ ಜಿಹಾದ್’ ಮತ್ತು `ಲ್ಯಾಂಡ್ ಜಿಹಾದ್’ ಬಗ್ಗೆ ಕೇಳಿದ್ದೇವೆ. ಆದರೆ ಐ.ಎನ್.ಡಿ.ಐ.ಎ ಮೈತ್ರಿಕೂಟದ ನಾಯಕರೊಬ್ಬರು ಈಗ `ವೋಟ್ ಜಿಹಾದ್’ಗೆ ಕರೆ ನೀಡಿದ್ದಾರೆ ಇದು ತುಷ್ಟೀಕರಣ ರಾಜಕೀಯದ ಒಂದು ಭಾಗ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಹೊಗಳಿದ ಪಾಕ್ ಮಾಜಿ ಸಚಿವ- ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
Advertisement
Advertisement
ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲು ಅನುಕೂಲವಾಗುವಂತೆ ಸಂವಿಧಾನ ಬದಲಿಸಲು ಕಾಂಗ್ರೆಸ್ ಬಯಸಿದೆ. ಧಾರ್ಮಿಕತೆ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು (Constitution) ಬದಲಾಯಿಸುವುದಿಲ್ಲ. ಅದರ ಮಿತ್ರ ಪಕ್ಷಗಳ ಸರ್ಕಾರಗಳ ಮೂಲಕ ರಾಜ್ಯಗಳಲ್ಲಿ ಹಿಂಬಾಗಿಲಿನ ಮೂಲಕ ಮೀಸಲಾತಿ ನೀಡುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಅವರು ಸವಾಲು ಹಾಕಿದ್ದಾರೆ.
ನಾನು ಹಲವು ವರ್ಷಗಳ ಕಾಲ ಗುಜರಾತ್‍ನಲ್ಲಿ ಕೆಲಸ ಮಾಡಿದ್ದೇನೆ. 2014ರಲ್ಲಿ ನೀವು ನನ್ನನ್ನು ದೇಶ ಸೇವೆ ಮಾಡಲು ಕಳುಹಿಸಿದ್ದೀರಿ. ಇಲ್ಲಿ ಕೆಲಸ ಮಾಡುವಾಗ, ಗುಜರಾತ್‍ನ ಅಭಿವೃದ್ಧಿ ಭಾರತದ ಅಭಿವೃದ್ಧಿ ಎಂಬ ಮಂತ್ರವನ್ನು ಹೊಂದಿದ್ದೆವು. ನನಗೆ ಒಂದೇ ಒಂದು ಕನಸಿದೆ, 2047ರಲ್ಲಿ ನಾವು 100 ವರ್ಷಗಳ ಸ್ವಾತಂತ್ಯ ದಿನಾಚರಣೆ ಪೂರೈಸಿದಾಗ ಭಾರತವು `ವಿಕಸಿತ್ ಭಾರತ್’ ಆಗಬೇಕು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾನು 24×7 ಕೆಲಸ ಮಾಡುತ್ತೇನೆ. ಇದು ನನ್ನ ಭರವಸೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ