ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ವಿಚಾರವಾಗಿ ಈಗ ಬಿಜೆಪಿ (BJP) ಪಾಳಯದ ನಾಯಕರಲ್ಲೇ ಗೊಂದಲ ಸೃಷ್ಟಿಯಾಗಿದೆ. ರೋಡ್ ಶೋ ವಿಷಯಕ್ಕೆ ಸಂಬಂಧಿಸಿ ಮಾಜಿ ಸಚಿವ ಆರ್.ಅಶೋಕ್ (R Ashok) ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಾತನಾಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವ ಸಮಯ ಹತ್ತಿರವಾಗುತ್ತಿದೆ. ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ನೇತೃತ್ವ ಬೇಕು ಎಂದು ವಿಶ್ವ ಬಯಸುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
Advertisement
Advertisement
ಬಿಜೆಪಿಯಿಂದ ಮತದಾರ ಚೇತನ, ಮಹಾಚೇತನ ಅಭಿಯಾನದ ಹಿನ್ನೆಲೆ ಮಾತನಾಡಿದ ಕೇಂದ್ರ ಸಚಿವೆ, ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಹಿತಿ ಇರುವುದಿಲ್ಲ. ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್, ನಕಲಿ ಮತದಾರರನ್ನು ಗುರುತಿಸಬೇಕಾಗಿದೆ. ಈ ಕಾರ್ಯವನ್ನು ಬಿಜೆಪಿ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.
Advertisement
ಗಡಿ ರಾಜ್ಯಗಳಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಮತದಾರರ ಹೆಸರನ್ನು ಕೈಬಿಡುವ ಕೆಲಸವೂ ನಡೆದಿತ್ತು. ಜಾತಿ ನೋಡಿ, ಹೆಸರು ನೋಡಿ ಹೆಸರು ತೆಗೆಯಲಾಗಿತ್ತು. ಸರಿಯಾದ ಮತದಾರರ ಪಟ್ಟಿ ತಯಾರಿಗೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಆಯೋಗಕ್ಕೆ ಪೂರಕವಾಗಿ ಬಿಜೆಪಿ ಕೆಲಸ ಮಾಡುತ್ತದೆ. 2024ರ ಚುನಾವಣೆಯಲ್ಲಿ ಯಾವುದೇ ಗೊಂದಲ ಆಗಬಾರದು. ಬಿಎಲ್‌ಎ 2 ನೇಮಕ ಸದ್ಯದಲ್ಲೇ ಮಾಡಲಿದ್ದೇವೆ. ಪಕ್ಷದಿಂದ ಗ್ರಾಮಗಳಲ್ಲಿ ಬಿಎಲ್‌ಎ 2 ನೇಮಕ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್ ತರಾಟೆ – ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಆದೇಶ
Advertisement
ಕಾವೇರಿ ವಿವಾದದ ಬಗ್ಗೆ ಸರ್ವಪಕ್ಷ ನಿಯೋಗ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮೊದಲು ಒಂದು ಶ್ವೇತಪತ್ರ ಹೊರಡಿಸಲಿ. ಕಾವೇರಿ ಅಣೆಕಟ್ಟಿನಲ್ಲಿ ಎಷ್ಟು ನೀರು ಇದೆ, ಕುಡಿಯುವ ನೀರಿನ ಲಭ್ಯತೆ, ಮಳೆ ಪ್ರಮಾಣದ ಬಗ್ಗೆ ಮೊದಲು ಒಂದು ಶ್ವೇತ ಪತ್ರ ಹೊರಡಿಸಲಿ. ಈ ಸಲ ಮಳೆ ಪ್ರಮಾಣ ಕಡಿಮೆ ಇದೆ. ನಮಗೆ ನೀರಿನ ಕೊರತೆ ಇದೆ. ಅದರಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದು ಐಎನ್‌ಡಿಐಎ ನಾಯಕರನ್ನು ತೃಪ್ತಿ ಪಡಿಸಲು. ಅನಾವಶ್ಯಕವಾಗಿ ಇದರಲ್ಲಿ ರಾಜಕೀಯ ಮಾಡ್ತಿರೋದು ಮುಖ್ಯಮಂತ್ರಿಗಳು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ನಿಮ್ಮ ಗ್ಯಾರಂಟಿ ಕಾರಣದಿಂದ ಯಾವ ಇಲಾಖೆಗೆ ಕೊಡಲೂ ಹಣ ಇಲ್ಲದಾಗಿದೆ. ಗ್ಯಾರಂಟಿಯನ್ನೂ ಸರಿಯಾಗಿ ಕೊಡಲು ಆಗಿಲ್ಲ. ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದೀರಿ. ಸಣ್ಣಪುಟ್ಟ ವ್ಯಾಪಾರಿಗಳ ಬಳಿ ತಿಂಗಳಿಗಿಷ್ಟು ಅಂತ ವಸೂಲಿ ಮಾಡಲಾಗುತ್ತಿದೆ. ನನ್ನ ಬಳಿ ಒಂದು ನಿಯೋಗ ಬಂದಿತ್ತು, ಅವರು ಈ ವಿಚಾರ ಹಂಚಿಕೊಂಡರು. ಅವರೆಲ್ಲ ಕರ್ನಾಟಕ ಬಿಟ್ಟು ಹೋಗುವ ಯೋಜನೆಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: KRSನಲ್ಲಿ ಕುಸಿದ ನೀರಿನ ಮಟ್ಟ – ಮಳೆ ಬಾರದಿದ್ರೆ ವರ್ಷಾಂತ್ಯಕ್ಕೆ ಕುಡಿಯುವ ನೀರಿಗೂ ತತ್ವಾರ
Web Stories