ಶಿವಮೊಗ್ಗ: ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕೆಂಬುದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಭಾಷಣ ಹಾಗೂ ಜೀವನ ಆದರ್ಶವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಿಳಿಸಿದರು.
ಶಿವಮೊಗ್ಗ (Shivamogga) ವಿಮಾನ ನಿಲ್ದಾಣ ಉದ್ಘಾಟಿಸಿದ ಅವರು, ಇಂದು ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನವಾಗಿದೆ. ಅವರು ತಮ್ಮ ಜೀವನವನ್ನು ಬಡವರಿಗೆ, ರೈತರಿಗಾಗಿ ಸಮರ್ಪಿಸಿದ್ದಾರೆ. ಬಿಎಸ್‌ವೈ ಹಿಂದಿನ ವಾರ ವಿಧಾನಸಭೆಯಲ್ಲಿ ನೀಡಿದ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
Advertisement
Advertisement
ಶಿವಮೊಗ್ಗದ ಜನರ ಬಹುಕಾಲದ ಕನಸು ನನಸಾಗಿದೆ. ಸಂಪ್ರದಾಯ ಮತ್ತು ಪರಂಪರೆಯ ಅದ್ಭುತ ಸಂಗಮ ಕರ್ನಾಟಕವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ. ಶಿವಮೊಗ್ಗ ಜನರ ಹೊಸ ಕನಸಿನ ಆರಂಭವಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣವು ಉತ್ಕೃಷ್ಟ ಕಾಲದಲ್ಲಿ ಆಗುತ್ತಿದೆ. 2014ಕ್ಕೆ ಮೊದಲು ಏರ್ ಇಂಡಿಯಾ ಸುದ್ದಿಯು ನಕಾರಾತ್ಮಕ ಸುದ್ದಿಗೆ ಸೀಮಿತವಾಗಿತ್ತು. ಇಂದು ಏರ್ ಇಂಡಿಯಾವು ವಿಶ್ವದ ದುಬಾರಿ ವಿಮಾನವನ್ನು ಖರೀದಿಸುವಷ್ಟು ಶಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
Advertisement
ಶಿವಮೊಗ್ಗವು ಪ್ರಕೃತಿ ಮತ್ತು ಸಂಸ್ಕೃತಿಯ ಸಂಗಮವಾಗಿದೆ. ಗಂಗಾ ಸ್ನಾನ ತುಂಗಾಪಾನ, ಗಂಗಾ ನದಿಯಲ್ಲಿ ಸ್ನಾನ ಮಾಡದವರು, ತುಂಗಾ ನದಿ ನೀರು ಕುಡಿಯದವರ ಜೀವನ ಅಪೂರ್ಣ ಎಂಬ ಮಾತಿದೆ. ಶಿವಮೊಗ್ಗವು ಮಲೆನಾಡಿನ ಹೆಬ್ಬಾಗಿಲಾಗಿದೆ ಎಂದ ಅವರು ಇಲ್ಲಿನ ಹಸಿರು, ಬೆಟ್ಟ, ಜೋಗ ಜಲಪಾತ, ಸಿಂಹ ಸಂರಕ್ಷಣಾ ಧಾಮ, ಶ್ರೀ ಶ್ರೀಧರ್ ಸ್ವಾಮಿಗಳ ಆಶ್ರಮ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಗಳನ್ನು ಸ್ಮರಿಸಿದರು. ಇದನ್ನೂ ಓದಿ: ಗೆಲ್ಲುವುದು 123 ಸ್ಥಾನವಲ್ಲ ಜೆಡಿಎಸ್ ತಪ್ಪಾಗಿ ಮುಂದೆ 1 ಸೇರಿಸಿದೆ- ಜಮೀರ್ ಅಹಮ್ಮದ್ ವ್ಯಂಗ್ಯ
Advertisement
ಡಬಲ್ ಎಂಜಿನ್ ಸರ್ಕಾರದ ಮೂಲಕ ಕರ್ನಾಟಕದ ವಿಕಾಸದ ಅಭಿಯಾನವು ಇನ್ನಷ್ಟು ಮುಂದೆ ಸಾಗಲಿದೆ. ನಾವು ಜೊತೆಯಾಗಿ ಸಾಗಬೇಕಿದೆ. ಜೊತೆಯಾಗಿ ಸಾಗುತ್ತೇವೆ, ಈ ರಾಜ್ಯದ ಮತ್ತು ಶಿವಮೊಗ್ಗದ ಜನರ ಕನಸು ನನಸು ಮಾಡಬೇಕಿದೆ. ಶಿವಮೊಗ್ಗದ ಮಾತೆಯರ ಜೀವನ ಸುಲಭವಾಗಿಸಲು ಜಲ್ ಜೀವನ್ ಯೋಜನೆಯಡಿ ಡಬಲ್ ಎಂಜಿನ್ ಸರ್ಕಾರವು 4,43,510 ಮನೆಗಳಿಗೆ ಹೊಸ ನಳದ ಸಂಪರ್ಕ ನೀಡಿದೆ ಎಂದರು. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರದಿಂದ ಗ್ರಾಮೀಣ ಜನರ ಕನಸು ನನಸಾಗಿದೆ: ಬಿಎಸ್‌ವೈ
2014ರ ಮೊದಲು ದೇಶದ ದೊಡ್ಡ ನಗರಗಳಲ್ಲಿ ಮಾತ್ರ ವಿಮಾನ ನಿಲ್ದಾಣ ಇರುತ್ತಿತ್ತು. ಬಿಜೆಪಿ ಸರ್ಕಾರವು 9 ವರ್ಷಗಳಲ್ಲಿ ದೇಶದಲ್ಲಿ 74 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿತು. ಹವಾಯಿ ಚಪ್ಪಲಿ ಧರಿಸುವವರೂ ಹವಾಜಿ ಜಹಾಜ್‌ನಲ್ಲಿ ಪ್ರಯಾಣಿಸಬೇಕು ಎನ್ನುವುದು ಬಿಜೆಪಿ ಉದ್ದೇಶವಾಗಿದೆ ಎಂದರು.