ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಜಿಎಸ್‍ಟಿ (GST) ಸುಧಾರಣೆಗಳ ಕುರಿತು ಸಭೆಯಲ್ಲಿ ಎನ್‍ಡಿಎ (NDA) ಸಂಸದರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ 20-30 ವ್ಯಾಪಾರಿ ಸಮ್ಮೇಳನಗಳನ್ನು ಆಯೋಜಿಸಲು ಸೂಚಿಸಿದ್ದಾರೆ.
ಸಮ್ಮೇಳನದಲ್ಲಿ ಜಿಎಸ್‍ಟಿಯ ಪ್ರಯೋಜನಗಳು ಮತ್ತು ಸುಧಾರಣೆಗಳ ಬಗ್ಗೆ ವ್ಯಾಪಾರಿಗಳು ಮತ್ತು ಅಂಗಡಿಯವರಿಗೆ ಅರಿವು ಮೂಡಿಸಲು ಹೇಳಿದ್ದಾರೆ. “ಗರ್ವ್ ಸೆ ಕಹೋ ಯೇ ಸ್ವದೇಶಿ ಹೈ” ಥೀಮ್‍ನಡಿ ಭಾರತೀಯ ಉತ್ಪನ್ನಗಳನ್ನು ಉತ್ತೇಜಿಸಲು ಸಮ್ಮೇಳನ ನಡೆಸುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ
ಇತ್ತೀಚೆಗೆ ಜಿಎಸ್‌ಟಿ ಕೌನ್ಸಿಲ್ ಸಿಹಿಸುದ್ದಿ ನೀಡಿತ್ತು. 8 ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್ (GST Slab) ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ.
ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಸ್ಲ್ಯಾಬ್ ಬದಲಾವಣೆ ಮಾಡಲಾಗಿದೆ. ದಿನ ಬಳಕೆ ವಸ್ತುಗಳು, ಆರೋಗ್ಯ ವಲಯ ಸೇರಿ ಹಲವು ವಲಯಗಳಿಗೆ ಅನುಕೂಲವಾಗಲಿದೆ. ಸಾಕಷ್ಟು ಚರ್ಚೆ ಬಳಿಕ ನಿರ್ಧಾರಕ್ಕೆ ಬರಲಾಗಿದ್ದು ಎಲ್ಲರೂ ಒಮ್ಮತದಿಂದ ಬೆಂಬಲವನ್ನು ನೀಡಿದ್ದಾರೆ. ಇದಕ್ಕಾಗಿ ನಾನು ಜಿಎಸ್‌ಟಿ ಕೌನ್ಸಿಲ್ ನ ಎಲ್ಲ ಸದಸ್ಯರಿಗೂ ಅಭಾರಿಯಾಗಿದ್ದಾನೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದರು. ಇದನ್ನೂ ಓದಿ: ಜಿಎಸ್‌ಟಿ ಸುಧಾರಣೆ; ಮೋದಿ ಸರ್ಕಾರದಿಂದ ರಾಷ್ಟ್ರದ ಜನತೆಗೆ ದೀಪಾವಳಿ ಕೊಡುಗೆ – ಹೆಚ್‌ಡಿಕೆ ಹರ್ಷ