ಬೆಂಗಳೂರು: ಚುನಾವಣಾ ರಾಜ್ಯ ಕರ್ನಾಟಕಕ್ಕೆ ಪದೇ ಪದೇ ಕೇಂದ್ರದ ನಾಯಕರು ಬಂದು ಹೋಗ್ತಿದ್ದಾರೆ. ಅಮಿತ್ ಶಾ (Amitshah) ಮತ್ತು ಮೋದಿ (Narendra Modi) ಅಂತು ವಾರದಲ್ಲಿ ಎರಡೆರಡು ಬಾರಿ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಬಿಜೆಪಿ ಅಲೆ ಸೃಷ್ಟಿಗೆ ಮುಂದಾಗಿದ್ದಾರೆ. ಇದೇ ವೇಳೆ ಇಂದು ಬೆಂಗಳೂರು ಏರ್ ಶೋ (Bengaluru AirShow) ಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭಾನುವಾರವೇ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ 14ನೇ ಆವೃತ್ತಿ ಯ ಏರೋ ಇಂಡಿಯಾ ಶೊ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಮಂತ್ರಿ @narendramodi ಅವರನ್ನು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡೆನು. pic.twitter.com/WUdPE402sg
— Basavaraj S Bommai (@BSBommai) February 12, 2023
ಭಾನುವಾರ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಮೋದಿ ಇಂದು ಯಲಹಂಕ ವಾಯುನೆಲೆಯಲ್ಲಿ ಏರ್ ಶೋಗೆ ಚಾಲನೆ ನೀಡಲಿದ್ದಾರೆ. ವಾರದಲ್ಲಿ 2ನೇ ಬಾರಿಗೆ ಬೆಂಗಳೂರಿಗೆ ಮೋದಿ ಭೇಟಿ ನೀಡ್ತಿದ್ದ ಈ ಮೂಲಕ ಬೆಂಗಳೂರು ಮತದಾರರ ಮನಗೆಲ್ಲಲು ದಾಳ ಹೂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮೋದಿ: ನಾಡಿನ ಗಣ್ಯರ ಜೊತೆ ಸಂವಾದ
Advertisement
Advertisement
ಬಿಗಿ ಪೊಲೀಸ್ ಭದ್ರತೆ: ನರೇಂದ್ರ ಮೋದಿ ಇಂದು ಏರೋ ಶೋ ಉದ್ಘಾಟನೆಗೆ ಹೋಗುವ ರಸ್ತೆಯ ಉದ್ದಗಲಕ್ಕೂ ಖಾಕಿ ಸರ್ಪಗಾವಲು ಮಾಡಲಾಗಿದೆ. ರಾಜಭವನ (Rajabhavana) ದಿಂದ ಮೇಕ್ರಿ ಸರ್ಕಲ್‍ವರೆಗೂ 300 ಸಂಚಾರಿ ಪೊಲೀಸರು, 500ಕ್ಕೂ ಹೆಚ್ಚು ಲಾ ಅಂಡ್ ಅರ್ಡರ್ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಏರೋ ಶೋ (Air Show) ನಡೆಯುವ ಸ್ಥಳದಲ್ಲಿ ಕೆಎಆರ್‍ಪಿ ತುಕಡಿ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ರಾಜಭವನದಿಂದ ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಮೆಕ್ರಿ ಸರ್ಕಲ್ ಹೆಚ್‍ಕ್ಯೂಟಿಸಿಗೆ ಹೋಗಿ ಅಲ್ಲಿಂದ ಏರೋ ಶೋ ನಡೆಯುತ್ತಿರೋ ಸ್ಥಳಕ್ಕೆ ಹೆಲಿಕಾಪ್ಟರ್‍ನಲ್ಲಿ ತಲುಪಲಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಬೊಮ್ಮಾಯಿ
Advertisement
Advertisement
ಎಲ್ಲೆಲ್ಲಿ ಸಂಚಾರ ನಿರ್ಬಂಧ: ಇತ್ತ ಏರ್ ಪೋರ್ಟ್ ರಸ್ತೆ (Airport Road) ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹೆಬ್ಬಾಳದ ಎಸ್ಟಿಮ್ ಮಾಲ್‍ನಿಂದ ಯಲಹಂಕವರೆಗೆ ನಿಷೇಧ ಹೇರಲಾಗಿದೆ. ಏರ್ ಶೋಗೆ ತೆರಳುವ ವಾಹನ ಸವಾರರು ನಿಗದಿತ ಪಾಸ್ ತೋರಿಸಿ ಫ್ಲೈ ಓವರ್ ಮೇಲೆ ತೆರಳಬಹುದು. ಯಲಹಂಕ, ಕೊಡಿಗೆಹಳ್ಳಿ, ಬ್ಯಾಟರಾಯನಪುರ ಸುತ್ತಮುತ್ತಲಿನ ಸಾರ್ವಜನಿಕರು ಫ್ಲೈ ಓವರ್ ಕೆಳಭಾಗದ ಸರ್ವಿಸ್ ರಸ್ತೆ ಬಳಸಲು ಸೂಚನೆ ನೀಡಲಾಗಿದೆ. ಕೆಐಎಎಲ್‍ಗೆ ತೆರಳುವ ಪ್ರಯಾಣಿಕರು ಹೆಣ್ಣೂರು ಜಂಕ್ಷನ್ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಏರ್ ಪೋರ್ಟ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕ ವಾಹನಗಳಿಗೆ ನಿಷೇಧ ಹೇರಲಾಗಿದೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k